ಪೆರ್ಡೂರು ಕೊಲೆ ಪ್ರಕರಣ: ಆರೋಪಿಯ ಪತ್ತೆಗೆ ನಮ ಬಿರುವೆರ್ ಹಿರಿಯಡಕ ಆಗ್ರಹ

ಹಿರಿಯಡ್ಕ: ನಮ ಬಿರುವೆರ್ ಹಿರಿಯಡಕ  ಇದರ ಪದಾಧಿಕಾರಿಗಳು
ವೈಯಕ್ತಿಕ ಕಲಹದಿಂದ ಹತ್ಯೆಗೀಡಾಗಿರುವ ಪೆರ್ಡೂರು ಬೈರಂಪಳ್ಳಿ ನಿವಾಸಿ ಪ್ರಶಾಂತ್ ಪೂಜಾರಿಯವರ ಪತ್ನಿಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಪೋಲೀಸ್ ಇಲಾಖೆ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಮುಖ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ರೀತಿಯ ಶಿಕ್ಷೆಗೆ ಗುರಿಪಡಿಸುವಂತೆ ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಶೇಖರ ಪೂಜಾರಿ,  ಸಂಘಟನೆಯ ಗೌರವ ಅಧ್ಯಕ್ಷರಾದ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವಿ ಎಸ್ ಪೂಜಾರಿ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಕೋಶಾಧಿಕಾರಿಗಳಾದ ಪ್ರದೀಪ್ ಪೂಜಾರಿ , ವಿನುತ್ ಪೂಜಾರಿ, ಗೌರವ ಸಲಹೆಗಾರ ಅರುಣ್‌ಜತ್ತನ್, ಸಂತೋಷ್ ಪೂಜಾರಿ, ಬಾಲಚಂದ್ರ ಪೂಜಾರಿ, ನಿಖಿಲ್ ಪೂಜಾರಿ, ಸುಧಾಕರ ಪೂಜಾರಿ, ರಮೇಶ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.