ಮೇ 25ರಂದು ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಮಾಲೋಚನಾ ಸಭೆ

ಉಡುಪಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಎದುರಿನ “ನಗಾರಿ ಉಪ್ಪರಿಗೆ”ಯು ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು ಕುಸಿಯುವ ಭೀತಿಯಲ್ಲಿದೆ. ಇದನ್ನು ದುರಸ್ತಿಗೊಳಿಸಲು ಸರಕಾರದಿಂದ ಅನುಮತಿ ದೊರೆತಿದ್ದು, ನಗಾರಿ ಉಪ್ಪರಿಗೆಯನ್ನು ಪುನರ್ ನಿರ್ಮಾಣ ಮಾಡುವ ಸಲುವಾಗಿ ಊರವರ, ಭಕ್ತಾದಿಗಳ ದಾನಿಗಳ ಸಮಾಲೋಚನಾ ಸಭೆಯನ್ನು ಇದೇ ಮೇ 25ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕರೆಯಲಾಗಿದೆ.

ಪೆರ್ಡೂರಿನ ಗ್ರಾಮಸ್ಥರು ಹಾಗೂ ಆಸ್ತಿಕ ಬಾಂಧವರೆಲ್ಲರೂ ಈ ಸಭೆಗೆ ಆಗಮಿಸಿ,ಸಲಹೆ-ಸೂಚನೆಗಳನ್ನು ನೀಡಬೇಕೆಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ವಿನಂತಿಸಿಕೊಂಡಿದ್ದಾರೆ.