ಪೆರಂಪಳ್ಳಿ ಅಂಬಡೆಬೆಟ್ಟುವಿನ ಅಪ್ರಾಪ್ತ ಯುವತಿ ನಾಪತ್ತೆ

ಉಡುಪಿ: ಮೊಬೈಲ್ ವಿಚಾರಕ್ಕೆ ಸಂಬಂಧಿಸಿ ತಾಯಿಯೊಂದಿಗೆ ಜಗಳ ಮಾಡಿಕೊಂಡು ಅಪ್ರಾಪ್ತ ಯುವತಿಯೊಬ್ಬಳು ಮನೆ ಬಿಟ್ಟು ಹೋಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೆರಂಪಳ್ಳಿ ಅಂಬಡೆಬೆಟ್ಟುವಿನ ನಿವಾಸಿ ಅವಿನ(16) ನಾಪತ್ತೆಯಾದ ಯುವತಿ. ಈಕೆ ಮೊಬೈಲ್ ವಿಚಾರಕ್ಕೆ ತಾಯಿಯೊಂದಿಗೆ ಜಗಳ ಮಾಡಿಕೊಂಡು ಏ. 13ರ ರಾತ್ರಿ 10.30ರಿಂದ ಏ. 14ರ ಬೆಳಿಗ್ಗೆ 5.45ರ ಅವಧಿಯಲ್ಲಿ ಮನೆಯಿಂದ ಕಾಣೆಯಾಗಿದ್ದಾರೆ.

ಈಕೆಯ ಬಗ್ಗೆ ಮಾಹಿತಿ ಸಿಕ್ಕಿದರೆ ಕೂಡಲೇ ಮಣಿಪಾಲ ಪೊಲೀಸ್ ಠಾಣೆ ಅಥವಾ ಉಡುಪಿ ಕಂಟ್ರೋಲ್ ರೂಮ್ ಅಥವಾ ಮೊ.ನಂ. 94808 05448, 94808 05475 ಸಂಪರ್ಕಿಸುವಂತೆ ಕೋರಲಾಗಿದೆ.