ಉಡುಪಿ: ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಪೇರಡ್ಕ ಕೇಂದ್ರ ಕಚೇರಿ ಆವರಣದಲ್ಲಿ ಆಚರಿಸಲಾಯಿತು.
ಜಿಲ್ಲಾ ಸಂಘದ ಗೌರವ ಸಲಹೆಗಾರರಾದ ವೀರಪ್ಪ ಗೌಡ ಪೇರಡ್ಕ ಧ್ವಜಾರೋಹಣ ನೆರವೇರಿಸಿದರು. ಧ್ವಜ ವಂದನೆ ಕಾರ್ಯಕ್ರಮವನ್ನು ವಿಷ್ಣುಮೂರ್ತಿ ಕೆರ್ವಾಶೆ ನೆರವೇರಿಸಿಕೊಟ್ಟರು.
ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು, ಸಂಘಟನಾ ಕಾರ್ಯದರ್ಶಿ ಗಂಗಾಧರ್ ಈದು, ಉಪಾಧ್ಯಕ್ಷ ಗೋಪಾಲ್ ಗೌಡ, ಕಾರ್ಯದರ್ಶಿ ಸಾಧು ನಾರ್ಜೆ, ಸುಂದರ್ ರೆಂಜಾಳ, ಹೆಬ್ರಿ ತಾಲೂಕು ಕಾರ್ಯದರ್ಶಿ ಹರೀಶ್ ಅಂಡಾರು, ಕಾರ್ಕಳ ಸಂಘಟನಾ ಕಾರ್ಯದರ್ಶಿ ದಿನೇಶ್ ಗೌಡ ನೂರಾಳ್ ಬೆಟ್ಟು, ಸಂದೀಪ್ ಅಂಡಾರ್ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.