ಉಡುಪಿ: ಮಲ್ಪೆ ಮೀನುಗಾರರ ಸಂಘದ ವತಿಯಿಂದ ಸಮಸ್ತ ಮೀನುಗಾರರ ಪರವಾಗಿಇತ್ತೀಚೆಗೆಕೃಷ್ಣೈಕ್ಯರಾದ ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ನುಡಿನಮನ ಸಲ್ಲಿಸಲಾಯಿತು. ಮೀನುಗಾರರ ಸಂಘದಅಧ್ಯಕ್ಷರಾದ ಕೃಷ್ಣ ಎಸ್. ಸುವರ್ಣಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ನುಡಿ ನಮನ ಸಲ್ಲಿಸಿದರು.
ಸಮಾರಂಭದಲ್ಲಿ ಮೀನುಗಾರರ ಸಂಘದಉಪಾಧ್ಯಕ್ಷರಾದ ರಮೇಶ್ಕೋಟ್ಯಾನ್, ನಾಗರಾಜಕುಂದರ್, ಸಾಧು ಸಾಲ್ಯಾನ್, ಶಿವಪ್ಪ ಕಾಂಚನ್, ಮೀನುಗಾರಿಕೆಇಲಾಖೆಯ ಉಪ ನಿರ್ದೇಶಕರಾದ ಕೆ. ಗಣೇಶ್, ಸಹಾಯಕ ನಿರ್ದೇಶಕರಾದ ಶಿವ ಕುಮಾರ್, ದಯಾನಂದ ಸುವರ್ಣ, ಸತೀಶ್ಕುಂದರ್, ಸುಭಾಸ್ ಬೆಂಗ್ರೆ, ಬೇಬಿಎಚ್. ಸಾಲ್ಯಾನ್, ಜಲಜಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು.