ಬೆಂಗಳೂರು: ಶ್ರೀ ಆದಿಚುಂಚನಗಿರಿ ಸಂಸ್ಥಾನದ ಶ್ರೀ ನಿಮರ್ಲಾನಂದನಾಥ ಸ್ವಾಮೀಜಿಯವರು ಸೋಮವಾರ ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು .
ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಪೇಜಾವರ ಶ್ರೀಗಳಿಗೆ ಶ್ರೀಸಂಸ್ಥಾನದ ಗೌರವಾರ್ಪಾಣೆ ಸಲ್ಲಿಸಿದ ಬಳಿಕ ಪೇಜಾವರ ಶ್ರೀಗಳೂ ಶ್ರೀ ನಿರ್ಮಲಾನಂದನಾಥ ಮತ್ತು ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರನ್ನು ಸತ್ಕರಿಸಿದರು. ಬಳಿಕ ವಿದ್ಯಾಪೀಠದ ಸಭಾಂಗಣದಲ್ಲಿ ನಡೆದ ನಿತ್ಯದ ಸಭಾ ಕಾರ್ಯಕ್ರಮದಲ್ಲೂ ಉಭಯ ಸ್ವಾಮೀಜಿಯವರು ಪಾಲ್ಗೊಂಡರು.












