ಕೆಂಪುಕೋಟೆಗೆ ರೈತರ ಮುತ್ತಿಗೆ: ಇತಿಹಾಸದಲ್ಲೇ ಇದು ಮೊದಲು

ದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಯು ಇಂದು ತೀವ್ರಸ್ವರೂಪ ಪಡೆದುಕೊಂಡಿತು. ಪ್ರತಿಭಟನಾ ನಿರತ ರೈತರು ದೆಹಲಿ ಕೆಂಪುಕೋಟೆ ಆವರಣವನ್ನು ಪ್ರವೇಶಿಸಿ, ರೈತಧ್ವಜವನ್ನು ಹಾರಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ನಿರತ ರೈತರು ಕೆಂಪುಕೋಟೆಗೆ ನುಗ್ಗಿದ್ದಾರೆ. ಸಾವಿರಾರು ರೈತರು ಧ್ವಜಾರೋಹಣ ಸ್ಥಳಕ್ಕೆ ಪ್ರವೇಶಿಸಿದ್ದು, ಧ್ವಜಸ್ತಂಭ ಏರಿ ಎರಡು ಬಾವುಟಗಳನ್ನು ಹಾರಿಸಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಂಪುಕೋಟೆಗೆ ರೈತರು ಮುತ್ತಿಗೆ ಹಾಕಿದ್ದಾರೆ.