ಉಡುಪಿ: ಸೋಮವಾರದಂದು ಜಿಲ್ಲಾಸ್ಪತೆಯ ವಠಾರದಲ್ಲಿ ಡಯಾಲಿಸ್ ಸಮಸ್ಯೆ ಸರಿಪಡಿಸುವಂತೆ ಕೋರಿ ರೋಗಿಗಳಿಂದ ಪ್ರತಿಭಟನೆ ನಡೆಯಿತು. ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿದ ರೋಗಿಗಳು ಸಮಸ್ಯೆಯನ್ನು ಸರಿಪಡಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ಕಾಂಗ್ರೆಸ್ ಮುಖಂಡ ಕೆ ಕೃಷ್ಣಮೂರ್ತಿ ಆಚಾರ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಶೀಘ್ರವೇ ಪರಿಹರಿಸುವುದಾಗಿ ರೋಗಿಗಳಿಗೆ ಭರವಸೆ ನೀಡಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ ಈಗಾಗಲೇ ಸಂಜೀವಿನಿ ಎಂಬ ಏಜೆನ್ಸಿಗೆ ನಿರ್ವಹಣೆ ವಹಿಸಲಾಗಿದ್ದು, 120 ಕಡೆಗಳಲ್ಲಿ ವಹಿಸಿಕೊಂಡಿರುವುದರಿಂದದ ರೋಗಿಗಳು ಕಷ್ಟಪಡುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಸರಕಾರಿ ಅಧಿಕಾರಿಗಳಿಗೆ ಗಮನ ನೀಡಿದ್ದು ಕೂಡಲೇ ಪರಿಹರಿಸಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದೆನೆ. ಸರಕಾರ ಕೂಡಲೇ ಪರಿಹರಿಸದಿದ್ದರೆ ಖಾಸಗಿಯವರ ಸಹಕಾರ ಪಡೆದು ಡಯಾಲಿಸಿಸ್ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು.
ಹಲವಾರು ರೋಗಿಗಳು ತಮಗಾಗುವ ಸಮಸ್ಯೆಗಳನ್ನು ಶಾಸಕರ ಬಳಿ ತೋಡಿಕೊಂಡರು.