ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮ ಮಾರಾಟ.!

ದೆಹಲಿ: ಯೋಗಗುರು ಬಾಬಾ ರಾಮ್ ದೇವ್ ಅವರು ಹುಟ್ಟುಹಾಕಿದ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮ ಈಗ ಮಾರಾಟವಾಗಿದೆ.

ದೇಶಿ ಕಂಪೆನಿ, ಉತ್ಪನ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ನನ್ನು ರುಚಿ ಸೋಯ 60 ಕೋಟಿ ರೂ. ಗಳಿಗೆ ಖರೀದಿ ಮಾಡಿದೆ ಎಂದು ತಿಳಿದುಬಂದಿದೆ.

ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಪತಂಜಲಿಯ ನಿರ್ದೇಶಕ ಮಂಡಳಿ ಮೇ 10ರಂದು ಉದ್ಯಮ ವರ್ಗಾವಣೆಗೆ ಅನುಮೋದನೆ ನೀಡಿದೆ. ರುಚಿ ಸೋಯ ಕಂಪೆನಿಗೆ ಪತಂಜಲಿ ಸಂಸ್ಥೆಯ ಸ್ವಾಧೀನ ಪ್ರಕ್ರಿಯೆ ಮುಂದಿನ ಇನ್ನೆರಡು ತಿಂಗಳೊಳಗೆ ನಡೆಯಲಿದೆ ಎಂದು ವರದಿಯಾಗಿದೆ.

ರುಚಿ ಸೋಯಾ ಇಂಡಸ್ಟ್ರೀಸ್ ಈ ಬಗ್ಗೆ ಹೇಳಿಕೆ ನೀಡಿದ್ದು, 60 ಕೋಟಿ ರೂಪಾಯಿಗಳಿಗೆ ಪತಂಜಲಿ ಬಿಸ್ಕೇಟ್ ಉದ್ಯಮವನ್ನು ಖರೀದಿಸಲಾಗಿದೆ. ಈಗಿರುವ ಉದ್ಯಮವನ್ನು ಮತ್ತಷ್ಟು ವಿಸ್ತರಣೆ ಮಾಡುವ ಉದ್ದೇಶದಿಂದ ಖರೀದಿ ಮಾಡಲಾಗಿದೆ ಎಂದು ತಿಳಿಸಿದೆ.