ನವದೆಹಲಿ:ದೈತ್ಯ ಬಿಸ್ಕಿಟ್ ಕಂಪೆನಿಗಳಲ್ಲಿ ಒಂದಾಗಿರುವ ಜನಪ್ರಿಯ ಬ್ರ್ಯಾಂಡ್ ಪಾರ್ಲೆಜಿ ಕಂಪೆನಿಯ ಉದ್ಯೋಗಿಗಳ ಭವಿಷ್ಯ ಇದೀಗ ಸಂಕಷ್ಟದಲ್ಲಿ ಸಿಲುಕಿದೆ. ಜಿಎಸ್ ಟಿ ಏರಿಕೆಯಿದಂದ ಸುಮಾರು 10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.
ಜಿಎಸ್ ಟಿ ಕಡಿತಗೊಳಿಸುವಂತೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಒಂದು ವೇಳೆ ಸರ್ಕಾರದಿಂದ ನಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದೆ ಆದಲ್ಲಿ 8 ಸಾವಿರದಿಂದ 10 ಸಾವಿರ ಮಂದಿಯನ್ನು ಕೈಬಿಡದೆ ಬೇರೆ ಉಪಾಯವಿಲ್ಲ ಎಂದು ಕಂಪೆನಿಯ ಮೂಲಗಳು ತಿಳಿಸಿದೆ.
ಆಟೋ ಮೊಬೈಲ್ ಕ್ಷೇತ್ರದಲ್ಲಿ ಈಗಾಗಲೇ ಬಹಳಷ್ಟು ಮಂದಿ ಉದ್ಯೋಗಿಗಳು ಕಳೆದುಕೊಂಡಿರುವ ಬೆನ್ನಲ್ಲೇ ಸಾವಿರಾರು ಜನರ ಬದುಕಿಗೆ ಆಶ್ರಯವಾಗಿದ್ದ ಪಾರ್ಲೆಜಿಯಂತಹ ದೈತ್ಯ ಸಂಸ್ಥೆಯಲ್ಲಿಯೂ ಉದ್ಯೋಗ ನಷ್ಟವಾಗುವ ಸೂಚನೆ ಸಿಕ್ಕಿರುವುದು ಉದ್ಯೋಗ ಕ್ಷೇತ್ರದ ತೀವ್ರ ಹಿನ್ನೆಡೆಯೇ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.












