ಉಡುಪಿ: ಪರ್ಕಳದ ಗೋಪಾಲ್ ಟವರ್ಸ್ ನಲ್ಲಿ ಇದೇ ಬರುವ ಮೇ 3ರಂದು “ಕ್ಷೇಮ ಪಾಲಿ ಕ್ಲಿನಿಕ್” ಶುಭಾರಂಭಗೊಳ್ಳಲಿದೆ.
ಈ ಪ್ರಯುಕ್ತ ಅಂದು ಬೆಳಿಗ್ಗೆ 9.00 ರಿಂದ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 3.30ರಿಂದ 5.30ರ ವರೆಗೆ ದಿನೇಶ್ ಸಂತೆಕಟ್ಟೆ ಮತ್ತು ಬಳಗ ಇವರಿಂದ “ಸಂಗೀತ ರಸಮಂಜರಿ” ಸಂಜೆ 5.30 ರಿಂದ 8.00ರ ವರೆಗೆ ಯಕ್ಷಗಾನ ತಾಳಮದ್ದಲೆ “ಕೃಷ್ಣಾರ್ಜುನ ಕಾಳಗ” ನಡೆಯಲಿದೆ.
ಹಿಮ್ಮೇಳದಲ್ಲಿ ಶ್ರೀ ರಾಘವೇಂದ್ರ ಮಯ್ಯ ಹಾಲಾಡಿ, ಮುಮ್ಮೇಳ: ಶ್ರೀ ವಾಸುದೇವ ರಂಗಭಟ್, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ರಮಣ ಆಚಾರ್ಯ, ಶ್ರೀ ಶಾಂತಾರಾಮ್ ಪಡುಬಿದ್ರಿ, ಶ್ರೀ ಹರೀಸ್ ಜೋಶಿ ಮತ್ತು ಇತರರು ಭಾಗವಹಿಸುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.