ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕ ಸಭೆ

ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಮೊದಲನೆ ಪೋಷಕ-ಶಿಕ್ಷಕರ ಸಭೆ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾ ಗಣೇಶ ಮೊಗವೀರ್ ಮಾತನಾಡಿ ವರ್ಷದ ಶೈಕ್ಷಣಿಕ ಕಾರ್ಯಕಲಾಪಗಳ ಬಗ್ಗೆ, ಬದಲಾದ ಪರೀಕ್ಷಾ ಪದ್ದತಿಯ ಕುರಿತು ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಕುರಿತು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿಯ ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಸಿಎ.ಗೋಪಾಲಕೃಷ್ಣ ಭಟ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಸಿಎ-ಸಿ.ಎಸ್ ಕೋ ರ್ಸ್ ಗಳು ಬಹಳಷ್ಟು ಪ್ರಯೋಜನಕಾರಿ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ಕಲಿಕೆಯ ಜೊತೆ-ಜೊತೆಗೆ ಸಿಎ-ಸಿ.ಎಸ್ ನಂತಹ ಕೋರ್ಸ್ ಗಳನ್ನು ಅಭ್ಯಾಸ ಮಾಡಿದರೆ ಸಾಕಷ್ಟು ಅವಕಾಶಗಳು ಲಭಿಸುತ್ತವೆ ಎಂದರು.

ಕಾಲೇಜಿನ ಉಪ-ಪ್ರಾಂಶುಪಾಲ ರಮೇಶ್ ಪೂಜಾರಿ,ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಈಗಾಗಲೇ ನಡೆದ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಪೋಷಕರಿಗೆ ನೀಡಿ ಕಲಿಕಾ ಪ್ರಗತಿಯ ಕುರಿತು ಚರ್ಚಿಸಲಾಯಿತು.

ಉಪನ್ಯಾಸಕ ಉದಯ್ ನಾಯ್ಕ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಅಭಿಜಿತ್ ವಂದಿಸಿದರು.