ಚಿನ್ನ ಗೆದ್ದು ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ಇತಿಹಾಸ ಸೃಷ್ಟಿಸಿದ ಪರಮ್‌ಜೀತ್

ದುಬೈ: ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಿರಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪರಮ್‌ಜೀತ್ ಪಾತ್ರರಾಗಿದ್ದಾರೆ. ಒಟ್ಟು 462 ಕೆಜಿ ಯಶಸ್ವಿಯಾಗಿ ಎತ್ತಿದ ಪರಮ್‌ಜೀತ್: ಶಕ್ತಿ ಮತ್ತು ದೃಢತೆಯ ಪ್ರದರ್ಶನದಲ್ಲಿ, ಪಂಜಾಬ್‌ನ 31 ವರ್ಷದ ಕ್ರೀಡಾಪಟು ಪರಮ್‌ಜಿತ್ ಅವರು 150 ಕೆಜಿ, 155 ಕೆಜಿ ಮತ್ತು 157 ಕೆಜಿ ಸೇರಿ ಒಟ್ಟು 462 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು.ಎರಡು ವರ್ಷಗಳ ಹಿಂದೆ ಕಂಚಿನ ಪದಕ ಗೆದ್ದಿದ್ದರು. ಪ್ರಸ್ತುತ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.ಕ್ರೀಡಾಪಟು ಪರಮ್‌ಜೀತ್ ಅವರು ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಹಿರಿಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚಿನ್ನ ಗೆದ್ದ ಪರಮಜೀತ್ ಹೇಳಿದ್ದೇನು?: ಈ ಐತಿಹಾಸಿಕ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಪರಮ್‌ಜೀತ್ ಅವರು, ”ಹಲವು ವರ್ಷಗಳ ಪರಿಶ್ರಮದ ಫಲವಾಗಿ ಈ ಪದಕ ಲಭಿಸಿದೆ” ಎಂದರು. ”ಈ ಕಾರಣದಿಂದಾಗಿ ಅವರು ಕೊಲಂಬಿಯಾದ ಪ್ರತಿಸ್ಪರ್ಧಿ ಮೊರೇಲ್ಸ್ ಗೊನ್ಜಾಲೆಜ್ ಅವರನ್ನು ಸೋಲಿಸಲು ಸಾಧ್ಯವಾಯಿತು” ಎಂದು ಸಂತಸ ವ್ಯಕ್ತಪಡಿಸಿದರು.ಇದರ ಆಧಾರದ ಮೇಲೆ ಅವರು ಕೊಲಂಬಿಯಾದ ಪ್ರತಿಸ್ಪರ್ಧಿ ಮೊರೇಲ್ಸ್ ಗೊನ್ಜಾಲೆಜ್ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಮತ್ತೊಂದೆಡೆ, ಅವರ ಕೊಲಂಬಿಯಾದ ಪ್ರತಿಸ್ಪರ್ಧಿ ಮೊರೇಲ್ಸ್ ಗೊನ್ಜಾಲೆಜ್ ಒಟ್ಟು 444 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು

ಪ್ಯಾರಿಸ್ ಪ್ಯಾರಾಲಿಂಪಿಕ್ 2024ರ ಅರ್ಹತಾ ಶ್ರೇಯಾಂಕದಲ್ಲಿ ಪರಮ್‌ಜೀತ್​ಗೆ 6ನೇ ಸ್ಥಾನ: ಬುಧವಾರದ ಉತ್ತಮ ಪ್ರದರ್ಶನ ನೀಡಿದ ನಂತರ, ಪ್ಯಾರಿಸ್ ಪ್ಯಾರಾಲಿಂಪಿಕ್ 2024ರ ಅರ್ಹತಾ ಶ್ರೇಯಾಂಕದಲ್ಲಿ ಪರಮ್‌ಜೀತ್ ಅವರು ಆರನೇ ಸ್ಥಾನದಲ್ಲಿದ್ದಾರೆ. ಜೂನ್ 2024ರ ವೇಳೆಗೆ ಶ್ರೇಯಾಂಕದಲ್ಲಿ ಅಗ್ರ ಎಂಟು ಆಟಗಾರರು ಪ್ಯಾರಿಸ್​ನ 2024ರ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುತ್ತಾರೆ. ಮೂರನೇ ಬಾರಿಗೆ ಎಮಿರೇಟ್ ನಗರ ದುಬೈನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 80 ದೇಶಗಳ 500ಕ್ಕೂ ಹೆಚ್ಚು ಪವರ್‌ಲಿಫ್ಟರ್‌ಗಳು ಸ್ಪರ್ಧೆ ಮಾಡಿದರು.”ಚಿನ್ನವನ್ನು ಪಡೆದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇತ್ತೀಚಿನ ಭುಜದ ಗಾಯದಿಂದಾಗಿ ನಾನು ಹೆಚ್ಚು ತೂಕವನ್ನು ಎತ್ತಲು ಸಾಧ್ಯವಾಗಲಿಲ್ಲ. ಆದರೆ, ನನ್ನ ಸತತ ಪ್ರಯತ್ನದಿಂದ ಸಾಧಿಸಲು ಸಾಧ್ಯವಾಯಿತು. ಈ ಪ್ರಶಸ್ತಿ ಲಭಿಸಿರುವುದಕ್ಕೆ ಸಂತೋಷವಾಗಿದೆ. ಇದು ನನಗೆ ದೊಡ್ಡ ಪ್ರೇರಣೆಯಾಗಿದೆ. ಏಷ್ಯನ್ ಪ್ಯಾರಾ ಗೇಮ್ಸ್ ಮತ್ತು ಪ್ಯಾರಿಸ್ 2024 ಪ್ಯಾರಾಲಿಂಪಿಕ್ ಗೇಮ್ಸ್‌ ಎದುರಿಸಲು ಪೂರಕವಾಗುತ್ತದೆ ಎಂದು ಹೇಳುತ್ತಾರೆ ಪರಮಜಿತ್.