ಹಂತ ಹಂತವಾಗಿ ನಿಮ್ಮ ಆರೋಗ್ಯವನ್ನೇ ಕಸಿಯುತ್ತೆ ಈ ಕಪ್: ಪೇಪರ್ ಕಪ್ ಬಿಡಿ, ಸ್ಟೀಲ್ ಲೋಟ ಹಿಡಿ: ದಯವಿಟ್ಟು ಈ ಸ್ಟೋರಿ ಓದಿ

ಕಬ್ಬು ಜ್ಯೂಸ್ ಕುಡೀರಿ, ಅಥವಾ ಟೀ ಕಾಫಿ ಏನೇ ಕುಡೀರಿ ಎಲ್ಲದಕ್ಕೂ ಕಾಗದದ ಕಪ್ ಎಂದು ಹೇಳುವಂತಹ ತೆಳು ಪ್ಲಾಸ್ಟಿಕ್ ಹೊದಿಕೆಯುಳ್ಳ ಕಪ್ ನಲ್ಲಿಯೇ ಟೀ ಕಾಫಿ ಎಲ್ಲವನ್ನೂ ಕೊಡುವ ಸಂಪ್ರದಾಯ ಈಗ ಎಲ್ಲೆಡೆ ಶುರುವಾಗಿದೆ. ಆದ್ರೆ ಇಂತಹ ಲೋಟಗಳಲ್ಲಿ ಬಿಸಿ ಬಿಸಿ ದ್ರವ ಪದಾರ್ಥ ಮತ್ತು ತಣ್ಣಗಿನ ದ್ರವ ರೂಪದ ವಸ್ತುಗಳನ್ನು ಹಾಕುವುದರಿಂದ ಅವೆಲ್ಲಾ ಕೆಲವೇ ಕ್ಷಣಗಳಲ್ಲಿ ಪ್ಲಾಸ್ಟಿಕ್ ಹೊದಿಕೆಯ ಜೊತೆ ಕರಗಿ ನೂರಾರು ಕಣಗಳಾಗಿ ನಮ್ಮ ದೇಹ ಸೇರಿ ಕ್ಯಾನ್ಸರ್ ನಿಂದ ಹಿಡಿದು ಕಿಡ್ನಿ ಮತ್ತು ಚರ್ಮ ಕಾಯಿಲೆಯಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನುವ ಸತ್ಯ ಬಹುತೇಕ ಜನರಿಗೆ ಗೊತ್ತಿಲ್ಲ. ಕಾಗದದ ಕಪ್‌ನೊಳಗಿನ ಮೈಕ್ರೋ ಪ್ಲಾಸ್ಟಿಕ್ ಪದರ ಕ್ಯಾನ್ಸರ್ ಅಲ್ಲದೆ, ಕರುಳು, ಕಿಡ್ನಿಗೂ ಆಪತ್ತು ತಂದೊಡ್ಡುತ್ತಿವೆ ಎನ್ನುತ್ತಾರೆ ಖರಗ್‌ಪುರ ಐಐಟಿ ತಜ್ಞರು

ದಯವಿಟ್ಟು ಇವನ್ನೆಲ್ಲಾ ಗಮನಿಸೋಣ:

ಕಾಗದದ ಕಪ್‌ಗಳನ್ನು ಜಲನಿರೋಧಕವಾಗಿಸಲೆಂದೇ ತೆಳು ಪ್ಲಾಸ್ಟಿಕ್ ಬಳಸುತ್ತಾರೇನೋ ಸರಿ. ಬಿಸಿ ಚಹಾ ಅಥವಾ ಕಾಫಿಯನ್ನು ಇಂಥ ಕಣ್ ಗೆ ಸುರಿದಾಗ ತೆಳು ಪ್ಲಾಸ್ಟಿಕ್ ಪದರ ಕರಗಲು ಆರಂಭಿಸುತ್ತದೆ. 1 ಕಪ್ ಚಹಾದಲ್ಲಿ 25 ಸಾವಿರಕ್ಕೂ ಹೆಚ್ಚು ಮೈಕ್ರೋ ಪ್ಲಾಸ್ಟಿಕ್ ಕಣಗಳು ಕರಗುವ ಸಾಧ್ಯತೆ ಇರುತ್ತದೆ ಎನ್ನುವುದು ಐಐಟಿ ತಜ್ಞರ ಆತಂಕ. ನಿತ್ಯ ಕಪ್ ಕುಡಿಯುತ್ತಿದ್ದೇವೆಂದರೆ, 75 ಸಾವಿರಕ್ಕೂ ಹೆಚ್ಚು ಮೈಕ್ರೋ ಪ್ಲಾಸ್ಟಿಕ್ ಕಣಗಳು ನಮ್ಮ ಪ್ರವೇಶಿಸುವ ಅಪಾಯವಿರುತ್ತದೆ. ಇಂಥ ಕಣಗಳು ನಮ್ಮ ದೇಹದೊಳಗೆ ಸಂಗ್ರಹಗೊಳ್ಳುತ್ತಾ ಹೋದಂತೆ, ಕೆಲವು ಭಾಗಗಳಿಗೆ ಹಾನಿ ಎದುರಾಗಲೂಬಹುದು ಎನ್ನುವುದು ತಜ್ಞರ ಆತಂಕ. ಒಮ್ಮೆ ಬಳಸಿ ಬಿಸಾಡಬಹುದಾದ ಈ ಕಪ್‌ಗಳನ್ನು ಪರಿಪೂರ್ಣವಾಗಿ ಕಾಗದದಿಂದಲೇ ಮಾರುತ್ತಾರೆಯೇ ಅಥವಾ ಇವೂ ಪ್ಲಾಸ್ಟಿಕನ್ನು ಹೊಂದಿವೆಯೇ ಎಂಬುದನ್ನು ನಾವ್ಯಾರೂ ಕಾಫೀ ಹೀರುವಾಗ ಯೋಚಿಸುವುದೇ ಇಲ್ಲ.

ಕಾಗದದ ಕಪ್‌ನಲ್ಲಿ ನಿತ್ಯ ಚಹಾ, ಕಾಫಿ ಸೇವಿಸುವುದರಿಂದ ಹಾರ್ಮೋನ್ ಗಳಲ್ಲಿ ಅಸಮತೋಲನ ಹೆಚ್ಚುತ್ತದೆ. ಜೀರ್ಣಾಂಗ ವ್ಯವಸ್ಥೆ ಅಲ್ಲದೆ, ಕರುಳಿಗೂ ಸೋಂಕು ವ್ಯಾಪಿಸ ಬಹುದು. ಯಕೃತ್ ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರಬಹುದು ಎನ್ನುತ್ತಾರೆ ಖರಗ್‌ಪುರ ಐಐ ಟಿ ತಜ್ಞರು. ಗರ್ಭಿಣಿಯರು ಇಂಥ ಕಪ್‌ಗಳನ್ನು ಬಳಸುದರಿಂದ ಗರ್ಭದ ಮೇಲೆಯೂ ಸಮಸ್ಯೆಯಾಗುತ್ತದೆ. ಎನ್ನುತ್ತಾರೆ ವೈದ್ಯರು. ಇದರ ಬಳಕೆಯು ಅಧಿಕ ರಕ್ತದೊತ್ತಡದ ಸಮಸ್ಯೆಗಳನ್ನೂ ತಂದೊಡ್ಡುತ್ತದೆ.

ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ ಬಳಿಕ ಈ ಕಣ್‌ಗಳು ಸೇರುವುದು ಭೂ ಒಡಲಿಗೆ. ಪರಿಸರ ಕಲುಷಿತಗೊಳಿಸುವಲ್ಲಿಯೂ ಈ ಕಪ್‌ಗಳ ಪಾತ್ರ ಗಮನಾರ್ಹ ಎಂಬು ದನ್ನು ಸ್ವೀಡನ್‌ನ ಗೊಥೆನ್‌ಬರ್ಗ್ ವಿವಿ ತಂಡ ಸಂಶೋಧನೆಯಿಂದ ಸಾಬೀತುಪಡಿಸಿತ್ತು, ವಿವಿ ತಂಡವು ಚಿಟ್ಟೆ ಮತ್ತು ಸೊಳ್ಳೆಯು ಲಾರ್ವಾಗಳ ಮೇಲೆ ಈ ಪ್ರಯೋಗ ನಡೆಸಿತ್ತು. ಕಾಗದದ ಕಪ್‌ಗಳನ್ನು ಕೆಲವು ವಾರಗಳವರೆಗೆ ನೀರಿನಲ್ಲಿ ಹಾಕಲಾಗಿತ್ತು. ಕಪ್‌ನಲ್ಲಿದ್ದ ರಾಸಾಯನಿಕಗಳು ನೀರಿನಲ್ಲಿ ಕರಗಿ ಲಾರ್ವಾಗಳನ್ನು ತಲುಪಿತು. ಇದು ಚಿಟ್ಟೆಗಳ ಜೀವಿತಾವಧಿಯ ಮೇಲೆ ನೇರ ಪರಿಣಾಮ ಬೀರಿತ್ತು ಎಂಬುದನ್ನು ಗೂಥೆನ್‌ಬರ್ಗ್ ವಿವಿಯ ಪರಿಸರ ವಿಜ್ಞಾನದ ಪ್ರಾಧ್ಯಾಪಕ ಬೆಥನಿ ಕಾರ್ನಿಗಮನಿಸಿದ್ದರು.

ಪ್ಲಾಸ್ಟಿಕ್ ಕಾಗದ ಲೋಟ ಬಿಡಿ :ಇನ್ನಾದರೂ ಸ್ಟೀಲ್ ಲೋಟ ಹಿಡಿ

ಮದುವೆ ಸಮಾರಂಭಗಳಲ್ಲಿ ಸ್ಟೀಲ್ ಲೋಟದಲ್ಲೇ  ಜ್ಯೂಸ್  ಕೊಡುವಂತೆ ವಿನಂತಿಸೋಣ, ಆನ್ ಲೈನ್ ನಲ್ಲಿ ಕಡಿಮೆ ವೆಚ್ಚದ ಸ್ಟೀಲ್ ಲೋಟಗಳು, ಫೋಲ್ಡೇಬಲ್ ಲೋಟಗಳು ಸಿಗುತ್ತವೆ ಇದನ್ನು ಆದಷ್ಟು ಬಳಸೋಣ, ಈ ಸಂಪ್ರದಾಯವನ್ನು ಪ್ಲಾಸ್ಟಿಕ್ ಲೋಟದ ಗಂಭೀರತೆಯನ್ನು ಅರಿತವರು ಬಳಸಿ ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ. ನಿಮ್ಮ ಮನೆಯ ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಹಾಳೆ, ಕಪ್ ಗಳನ್ನು ಬಳಸದೇ ಸ್ಟೀಲ್ ಲೋಟಗಳಿಗೆ ಆದ್ಯತೆ ನೀಡಿ.