ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪ.ಪೂ ಕಾಲೇಜಿನ 2022-23 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 99.49 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಿರಿ ಎಸ್. 592 ಅಂಕ ಪಡೆದು ರಾಜ್ಯಕ್ಕೆ 6 ನೇ ಸ್ಥಾನ ಪಡೆದಿದ್ದಾರೆ. ಸಾನ್ವಿ ನಾಯಕ್ 590 ಅಂಕ ಪಡೆದು 8 ನೇ ಸ್ಥಾನವನ್ನು ಹಾಗೂ ಅನ್ವಿತಾ ಶೆಟ್ಟಿ 589ಅಂಕದೊಂದಿಗೆ 9 ನೇ ಸ್ಥಾನವನ್ನು ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 108 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಕ್ಷತಾ 591 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನಿಯಾಗಿದ್ದಾರೆ. ಗಣಿತ ಶಾಸ್ತ್ರದಲ್ಲಿ -4, ಭೌತ ಶಾಸ್ತ್ರದಲ್ಲಿ 2, ಗಣಕ ವಿಜ್ಞಾನದಲ್ಲಿ-9 ಲೆಕ್ಕ ಶಾಸ್ತ್ರದಲ್ಲಿ-16, ಸಂಸ್ಕೃತದಲ್ಲಿ- 15, ವ್ಯವಹಾರ ಅಧ್ಯಯನ-8 ಸಂಖ್ಯಾಶಾಸ್ತ್ರ-7 ಕನ್ನಡದಲ್ಲಿ -4 ವಿದ್ಯಾರ್ಥಿಗಳು ವಿಷಯವಾರು ಪೂರ್ಣಾಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ , ಉಪನ್ಯಾಸಕ ವರ್ಗ, ಉಪನ್ಯಾಸಕೇತರ ವರ್ಗದವರು ಅಭಿನಂದಿಸಿದ್ದಾರೆ.












