ಉಡುಪಿ: ಪಂಚಮಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇವರ 2024 -25ರ ವಾರ್ಷಿಕ ಮಹಾಸಭೆಯು ಸೆ.20ರಂದು ಶ್ರೀ ಕೃಷ್ಣ ಪ್ರಜ್ಞ ಪ್ರತಿಷ್ಠಾನ ಕಲ್ಸಂಕ ಇಲ್ಲಿ ನಡೆಯಿತು .ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸತ್ಯಪ್ರಸಾದ್ ಶೆಣೈ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು ಉತ್ತಮ ವ್ಯವಹಾರ ಮಾಡಿದ್ದು ಭವಿಷ್ಯದಲ್ಲಿ ಇನ್ನೂ ಹೆಚ್ಚು ಹೆಚ್ಚು ಸಂಘದ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತ್ರಿಶಾ ಪ್ರಭು ಇವರನ್ನು ಸನ್ಮಾನಿಸಲಾಯಿತು.


ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಹರೀಶ್ ಪ್ರಭು ಹಾಗೂ ನಿರ್ದೇಶಕರಾದ ಸಂಜೀವ ಪ್ರಭು,ದುರ್ಗ ಪ್ರಸಾದ್,ವಿಜಯ್ ಶೆಣೈ ,ಸಂದೇಶ್ ಕಾಮತ್ ,ಕಾರ್ತಿಕ್ ಪ್ರಭು ,ರಾಘವೇಂದ್ರ ನಾಯಕ್ ,ನವ್ಯ ಸಿ ಪ್ರಭು ,ಪ್ರೀತಿ ಶೆಣೈ,ರವೀಂದ್ರ ಕೇಳ್ಕರ್ ,ಸುರೇಂದ್ರ ನಾಯಕ್ ,ಶ್ರುತಿ ಟಿ ಜಿ ಈ ಸಂದರ್ಭದಲ್ಲಿ ಹಾಜರಿದ್ದರು .ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾತಿ ಇವರು ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿ ,ಶೇ.9 ಡಿವಿಡೆಂಡ್ ಘೋಷಣೆ ಮಾಡಿದರು.ಸಿಬ್ಬಂದಿಗಳಾದ ದೀಪಿಕಾ, ದಿವ್ಯಾ, ನಾಗಪ್ರಸಾದ್,ದೇವರಾಜ್ ಉಪಸ್ಥಿತರಿದ್ದರು.
ಕೊನೆಯಲ್ಲಿ ನಿರ್ದೇಶಕರಾದ ರಾಘವೇಂದ್ರ ನಾಯಕ್ ವಂದನಾರ್ಪಣೆ ಮಾಡಿದರು.


















