ಪಕ್ಷದ ಟೀಶರ್ಟ್ ವಿತರಿಸುತ್ತಿದ್ದ ಮರ್ಸಿಡೆಸ್ ಬೆಂಝ್ ಕಾರ್ ವಶ

ಉಡುಪಿ: ಅನುಮತಿ ಇಲ್ಲದೇ ಬಿಜೆಪಿ ಪಕ್ಷದ  ಟೀಶರ್ಟ್‍ಗಳನ್ನು ತಂದು ವಿತರಿಸುತ್ತಿದ್ದ ಮರ್ಸಿಡೆಸ್ ಬೆಂಝ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಉಡುಪಿಯಲ್ಲಿ ನಡೆದ ಬಿಜೆಪಿ ಪಕ್ಷದ ಸೈಕಲ್ ಜಾಥಾ ಪ್ರಾರಂಭ ಸಂದರ್ಭದಲ್ಲಿ, ಬನ್ನಂಜೆ ಸಮೀಪ ಅನುಮತಿ ಇಲ್ಲದೇ ಕಾರಿನಲ್ಲಿ ಟೀಶರ್ಟ್, ಟೋಪಿ ತಂದು ವಿತರಿಸಲಾಗುತಿತ್ತು. ಈ ಸಂದರ್ಭದಲ್ಲಿ ಚುನಾವಣಾ ತಪಾಸಣಾ ತಂಡದ ಅಧಿಕಾರಿಗಳು ದಾಳಿ ನಡೆಸಿ, ಸೊತ್ತುಗಳನ್ನು ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ನಾಗರಾಜ್ ಅವರು ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.