ಆಪರೇಶನ್ ಸಿಂಧೂರದಿಂದ ಪಾಕ್ ಗೆ ದೊಡ್ಡ ಹೊಡೆತ ಕೊಟ್ಟಿರೋ ಭಾರತ, ಕೆಲವು ದಿನಗಳ ಹಿಂದಷ್ಟೇ ಪಾಕ್ ನಟರ ಚಿತ್ರಗಳನ್ನು ಭಾರತದಲ್ಲಿ ಬ್ಯಾನ್ ಮಾಡಿತ್ತು. ಇದೀಗ ಭಾರತದಲ್ಲಿ ಓಟಿಟಿ ವೇದಿಕೆಗಳಿಂದ ಪಾಕ್ ನಟರ, ನಿರ್ದೇಶಕರ, ಸಿನಿಮಾ, ಸೀರಿಯಲ್ ಸೇರಿದಂತೆ ಎಲ್ಲಾ ರೀತಿಯ ವಿಡಿಯೋಗಳನ್ನು ಬ್ಯಾನ್ ಮಾಡಿ ಪಾಕ್ ಸಿನಿಮಾರಂಗಕ್ಕೆ ದೊಡ್ಡ ಹೊಡೆತ ನೀಡಿದೆ.
ಪಾಕಿಸ್ತಾನಿ ನಟ ಫವಾದ್ ಖಾನ್ ಹಾಗೂ ಬಾಲಿವುಡ್ ನಟಿ ವಾಣಿ ಕಪೂರ್ ನಟಿಸಿದ್ದ ಅಬೀರ್ ಗುಲಾಲ್ ಸಿನಿಮಾ ಇನ್ನೇನು ರಿಲೀಸ್ ಆಗೋದು ಮಾತ್ರ ಬಾಕಿ ಇತ್ತು ಆದರೆ ಭಾರತದ ಕಠಿಣ ನಿರ್ಧಾರದಿಂದ ಪಾಕ್ ದೊಡ್ಡ ಸಂಕಷ್ಟ ಅನುಭವಿಸಿದೆ. ತನ್ನ ಪ್ರತಿರೋಧವನ್ನು ಭಾರತ ಈ ರೀತಿ ತೋರಿಸಿರುವುದಕ್ಕೆ ದೊಡ್ಡ ಮಟ್ಟಿಗಿನ ಬೆಂಬಲ ವ್ಯಕ್ತವಾಗಿದೆ. ಇದು ಪಾಕಿಸ್ತಾನದ ಮನೋರಂಜನಾ ಉದ್ಯಮಕ್ಕೆ ದೊಡ್ಡ ಹೊಡೆತ ಎನ್ನುವುದರಲ್ಲಿ ಎರಡು ಮಾತಿಲ್ಲ.












