ಉಡುಪಿ:ಪಾದೂರು-ಕಳತ್ತೂರು ಶ್ರೀ ಬ್ರಹ್ಮಬೈದೆರುಗಳ ಗರಡಿಯ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಳಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದಿನಾಂಕ 22-02-2026ರ ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಭಕ್ತಿಭಾವ ಹಾಗೂ ಸಡಗರದ ವಾತಾವರಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕಾಪು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಟೆ ಅವರು ಇತರ ಗಣ್ಯ ಅತಿಥಿಗಳೊಂದಿಗೆ ಸೇರಿ ಬ್ರಹ್ಮಕಳಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು.
ಈ ಶುಭ ಸಂದರ್ಭದಲ್ಲಿ ಉಭಯ ಗ್ರಾಮದ ಗುತ್ತುಬರ್ಕೆ ನಟ್ಟಿಲ್ಲ ಮನೆಯ ಪ್ರಮುಖರು ಹಾಗೂ ಗ್ರಾಮದ ಭಕ್ತಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದು, ಮುಂಬರುವ ಧಾರ್ಮಿಕ ಕಾರ್ಯಕ್ರಮಗಳ ಯಶಸ್ವಿಗೆ ಸರ್ವರ ಸಹಕಾರವನ್ನು ಕೋರಿದರು.
ಪಾದೂರು ಗುತ್ತು ಜಯಕೃಷ್ಣ ಆಳ್ವ, ಸಮಿತಿಯ ಗೌರವಾಧ್ಯಕ್ಷರುಗಳಾದ ಕಳತ್ತೂರು ನಟ್ಟಿಲ್ ಕರುಣಾಕರ ಪೂಜಾರಿ, ಕಳತೂರು ನಡಿಗುತ್ತು ಗಣೇಶ್ ಎಸ್ ಶೆಟ್ಟಿ ಕನ್ನಡ ಸಾಹಿತ್ಯ ಪರಿಷತ್ತು ಕಾಪು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಟೆ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಅರುಣಾಕರ ಶೆಟ್ಟಿ, ವಿಶ್ವನಾಥ ಅಮೀನ್ ಗರಡಿ ಮನೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಬರಬೆಟ್ಟು ಗುತ್ತು ರಂಗನಾಥ ಶೆಟ್ಟಿ, ಕಳತ್ತೂರು ಕುಶಲಶೇಖರ ಶೆಟ್ಟಿ ಹಾಲ್ ನ ಮಾಲಕರಾದ ಶೇಖರ ಶೆಟ್ಟಿ, ಕಳತೂರು, ಸಮಿತಿಯ ಉಪಾಧ್ಯಕ್ಷರುಗಳಾದ ದಿವಾಕರ ಬಿ ಶೆಟ್ಟಿ ಮತ್ತು ವಳದೂರು ಪಡುಮನೆ ವಸಂತ ಪೂಜಾರಿ, ಸುಬ್ರಾಯ ಕರ್ಕೇರ ಮಂಗಳೂರು, ಉಪಸ್ಥಿತರಿದ್ದರು.
















