ಉಡುಪಿ ಜುಲೈ 28: ಉಡುಪಿ ತಾಲೂಕಿನ ಪಡುಬಿದ್ರಿ ನಾಡ್ಸಾಲು ಗ್ರಾಮದ ಕಂಚಿನಡ್ಕ ನಿವಾಸಿ ರವೀಂದ್ರ(35) ಎನ್ನುವವರು ಗಾರೆ ಕೆಲಸ ಮಾಡಿಕೊಂಡಿದ್ದು ಜುಲೈ 14 ರಂದು ಕೆಲಸ ಮಾಡುತ್ತಿದ್ದ ಅರೆಹಳ್ಳಿಯಿಂದ ಪಡುಬಿದ್ರೆಗೆ ವಾಪಾಸು ಬಂದಿದ್ದು ಜುಲೈ 15 ರಂದು ಮಧ್ಯಾಹ್ನ 1.00 ಗಂಟೆಗೆ ಪಡುಬಿದ್ರಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಇದುವರೆಗೂ ಮನೆಗೆ ವಾಪಾಸಾಗದೇ ನಾಪತ್ತೆಯಾಗಿರುತ್ತಾರೆ.
5 ಅಡಿ 6 ಇಂಚು ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕನ್ನಡ, ತುಳು, ತಮಿಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು ದೂ.ಸಂ: 9480805450, 0820-2555452, ಕಾಪು ವೃತ್ತ ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂ: 9480805431, 0820-2552133, ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0820-2525444 ಅನ್ನು ಸಂಪರ್ಕಿಸುವoತೆ ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.















