udupixpress
Home Trending ಪಡುಬಿದ್ರಿ: ಹೆದ್ದಾರಿ ಬದಿಯಲ್ಲಿ ನಾಲ್ಕು ನವಿಲಿನ ಮೊಟ್ಟೆಗಳು ಪತ್ತೆ

ಪಡುಬಿದ್ರಿ: ಹೆದ್ದಾರಿ ಬದಿಯಲ್ಲಿ ನಾಲ್ಕು ನವಿಲಿನ ಮೊಟ್ಟೆಗಳು ಪತ್ತೆ

ಉಡುಪಿ: ಪಡುಬಿದ್ರಿ ಬೀಡು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯನ್ನು ಸ್ವಚ್ಛ ಮಾಡುತ್ತಿರುವಾಗ ರಾಷ್ಟ್ರಪಕ್ಷಿ ನವಿಲಿನ ಮೊಟ್ಟೆಗಳು ಪತ್ತೆಯಾಗಿವೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬುಧವಾರ ಹೆದ್ದಾರಿ ಗುತ್ತಿಗೆದಾರರು ಹುಲ್ಲು ಕಟಾವು ಮಾಡಿ ಸ್ವಚ್ಛ ಮಾಡುತ್ತಿದ್ದಾಗ ಹುಲ್ಲಿನ ಮಧ್ಯೆ ನವಿಲಿನ ನಾಲ್ಕು ಮೊಟ್ಟೆಗಳು ಪತ್ತೆಯಾಗಿದ್ದವು. ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆಯ ಉಡುಪಿ ವಲಯಾಧಿಕಾರಿಗೆ ಮಾಹಿತಿ ನೀಡಲಾಯಿತು.

ಬಳಿಕ ಮೊಟ್ಟೆಗಳನ್ನು ಸಂರಕ್ಷಿಸಿ, ಕೃತಕ ಕಾವು ನೀಡಿ ಮರಿಗಳನ್ನು ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಮುಖಾಂತರ ದ.ಕ. ಜಿಲ್ಲೆಯ ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಯಿತು.

error: Content is protected !!