ಉಡುಪಿ: ಪಡುಬಿದ್ರಿ ಬಡಾ ಗ್ರಾಮದ ಉಚ್ಚಿಲ ಪೊಲ್ಯ ರಸ್ತೆಯ ಮೈದಾನದಲ್ಲಿ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ಮಸೀದಿ ಬಳಿಯ ನಿವಾಸಿ ಫರ್ಹಾನ್ (27) ಹಾಗೂ ಕಾಪು ಕೊಂಬಗುಡ್ಡೆ ನಿವಾಸಿ ಮಹಮ್ಮದ್ ಹಾಸಿಂ (21) ಬಂಧಿತ ಆರೋಪಿಗಳು.

ಆರೋಪಿಗಳಿಂದ ಸುಮಾರು 30 ಸಾವಿರ ರೂ. ಮೌಲ್ಯದ 9.37 ಗ್ರಾಂ ತೂಕದ ಎಂಡಿಎಂಎ ಮಾತ್ರೆ ಗಳ ಪ್ಯಾಕೆಟ್‌ಗಳು, 5 ಸಾವಿರ ರೂ. ನಗದು, ವಿವೋ ಕಂಪೆನಿಯ ಒಂದು ಮೊಬೈಲ್ ಹಾಗೂ ಮೋಟಾರು ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾದಕವಸ್ತು ಮಾರಾಟ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.


















