ಭಾರತ ದೇಶದ ನೈಜ ರತ್ನಗಳಿಗೆ ; ಪದ್ಮಶ್ರೀ ಪ್ರಶಸ್ತಿ ಗೌರವ  

ವೃಕ್ಷ ಮಾತೆ ಶ್ರೀಮತಿ ಸಾಲುಮರದ ತಿಮ್ಮಕ್ಕಸಯ್ಯದ್ ಶಬ್ಬೀರ್  ಪ್ರಾಣಿಗಳ ಕಲ್ಯಾಣ ಮತ್ತು ಗೋಮಾತೆ ರಕ್ಷಣೆಗಾಗಿ.ಕಾಳಂಜಿಯಂ ಮ್ಯೂಚುಯಲ್ ಮೂವ್ಮೆಂಟ್ಗಾಗಿ  ಚಿನಾಪಿಲೈ.ಚಹಾವನ್ನು ಮಾರಾಟ ಮಾಡುವ ಮೂಲಕ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ನಡೆಸುತ್ತಿರುವ ಶಾಲೆಗಾಗಿ  ಡಿ ಪ್ರಕೇಶ್ ರಾವ್.ಸಿಕ್ಕಿಂ ಮತ್ತು ಭಾರತದ ಇತರ ಭಾಗಗಳಲ್ಲಿ ದಿವ್ಯಾಂಗ್ ರ ಕಲ್ಯಾಣಕ್ಕಾಗಿ  ಡ್ರುಪ್ಪಾಡಿ ಘಿಮಿರಾಯ್.ಅಪರೂಪದ ವಿಧದ ಬೀಜಗಳನ್ನು ಸಂಗ್ರಹಿಸುವುದಕ್ಕಾಗಿ  ಕಮಲಾ ಪೂಜರಿ.ಏಕಾಂಗಿಯಾಗಿ 3 ಕಿ.ಮಿ ಉದ್ದದ  ಸುರಂಗ ಮಾರ್ಗಕೆತ್ತಿದ  ದೀತರಿ ನಾಯಕ್ ಜಿ ಇವರೆಲ್ಲರ  ಸಾಧನೆಯನ್ನು ಗುರುತಿಸಿ,ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಪದ್ಮಶ್ರೀ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ  ರಾಷ್ಟ್ರಪತಿ ರಾಮನಾಥ್ ಕೊವಿಂದ್  ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಕೋವಿಂದ್ ಅವರಿಗೆ ಆರ್ಶೀವಾದ ನೀಡಿದ ತಿಮ್ಮಕ್ಕ
ವಿಶೇಷವಾಗಿ 107 ವರ್ಷದ ವೃಕ್ಷ ಮಾತೆ  ಸಾಲುಮರದ ತಿಮ್ಮಕ್ಕ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಬರುತ್ತಿದ್ದಂತೆ ಸಮಾರಂಭದಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ತಟ್ಟುವ ಮುಖಾಂತರ ಸಾಲುಮರದ ತಿಮ್ಮಕ್ಕರಿಗೆ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಾಲುಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ತಿಮ್ಮಕ್ಕ ಅವರು ರಾಷ್ಟ್ರಪತಿ ಅವರ ಹಣೆ ಮುಟ್ಟಿ ಆಶೀರ್ವದಿಸಿದರು.ರಾಷ್ಟ್ರಪತಿಗಳು ಸಹ ದೀರ್ಘಾಯುಶಿ ತಿಮ್ಮಕ್ಕ ಅವರ ಆಶೀರ್ವಾದವನ್ನು ಭಕ್ತಿ ಪೂರ್ವಕವಾಗಿ ಸ್ವೀಕರಿಸಿದ ಅಪೂರ್ವ ಘಟನೆ ಸಭೆಯಲ್ಲಿ ವಿಶೇಷವಾಗಿ ಎಲ್ಲರ  ಗಮನ ಸೆಳೆಯಿತು. ತಮ್ಮನ್ನು ಆಶೀರ್ವಾದಿಸಿದ ತಿಮ್ಮಕ್ಕ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಕೋವಿಂದ್‌ ಕನ್ನಡದಲ್ಲಿ ಟ್ವೀಟ್‌ ಮಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.