ಉಡುಪಿ: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (ಯುಎಂಆರ್ ಎ)ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಜ್ಜರಕಾಡಿನ ಟೌನ್ ಹಾಲ್‌ನಲ್ಲಿ ನಡೆಯಿತು.
ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು, ಒಂದು ಸಂಘಟಿತ ಸಂಸ್ಥೆಯ ಮೂಲಕ ಯಾವುದೇ ವೃತ್ತಿಗೆ ಗೌರವ ಸಲ್ಲಿಸಬಹುದಾಗಿದೆ. ಅಸೋಸಿಯೇಷನ್ ಸ್ಥಾಪಿಸಿ ಅದರ ಮೂಲಕ ತಾವು ಎದುರಿಸುವ ಸಮಸ್ಯೆ, ಸವಾಲುಗಳನ್ನು ಕೊನೆಗಾಣಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮೊಬೈಲ್ ರೀಟೇಲರ್ಸ್ ಗಳು ಒಗ್ಗೂಡಿ ಸ್ಥಾಪಿಸಿರುವ ಮೊಬೈಲ್ ರಿಟೇಲರ್ಸ್ ಅಸೋಸಿಯೇಷ್ ಅವರ ಎಲ್ಲ ಸಮಸ್ಯೆ, ಸವಾಲುಗಳನ್ನು ಹೋಗಲಾಡಿಸಲಿ. ಅವರ ಶ್ರೇಯೋಭಿವೃದ್ಧಿ ಸಹಕಾರಿಯಾಗಲಿ ಎಂದು ಹಾರೈಸಿದರು.

ಮೊಬೈಲ್ ಇಂದು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಬ್ಯಾಂಕಿಂಗ್ ವ್ಯವಹಾರ ಸಹಿತ ಎಲ್ಲ ವಹಿವಾಟಗಳು ಮೊಬೈಲ್ ನಲ್ಲಿಯೇ ನಡೆಯುತ್ತದೆ. ಹೀಗಾಗಿ ಮೊಬೈಲ್ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು ಎಂದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಇಂದು ಮೊಬೈಲ್ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಮನುಷ್ಯ ಬಹುತೇಕ ದೈನಂದಿನ ಚಟುವಟಿಕೆಗಳು ಮೊಬೈಲ್ ಮೂಲಕವೇ ನಡೆಯುತ್ತದೆ. ಹಾಗಾಗಿ ಮೊಬೈಲ್ ರಿಟೇಲರ್ಸ್ ಕೂಡ ಅಗತ್ಯ ಸೇವೆಗಳ ಅಡಿಯಲ್ಲಿ ತರುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಹಿರಿಯ ವಕೀಲ ಶಾಂತಾರಾಮ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ವಿದುಷಿ ದೀಕ್ಷಾ ವಿ., ಮೊಬೈಲ್ ಉದ್ಯಮ ಪ್ರತಿನಿಧಿಗಳಾಗಿ ಸದಾನಂದ್ (ಶಿಯೋಮಿ), ವಿನ್ನಿಲ್ ಕುಮಾರ್ (ವಿವೋ), ಚೇತನ್ ಎಂ (ಒಪ್ಪೋ), ಮತ್ತು ಸೋಮಶೇಖರ್ (ನಥಿಂಗ್), ಅಲ್ ಇಂಡಿಯಾ ಮೊಬೈಲ್ ರಿಟೇಲರ್ ಅಸೋಸಿಯೇಷನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನವ್ನೀತ್ ಪಾಠಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸುಹಾಸ್ ಕಿಣಿ, ರಾಜ್ಯ ಉಪಾಧ್ಯಕ್ಷ ಮೋಹನ್ ಹುಗಾರ್, ಜಿಲ್ಲಾ ಅಸೋಸಿಯೇಷನ್ ಗೌರವಾಧ್ಯಕ್ಷ ಸಂದೇಶ್ ಬಲ್ಲಾಳ್, ಗೌರವ ಸಲಹೆಗಾರ ರಾಜೇಶ್ ಮಾಬಿಯನ್, ಸಲೀಂ, ಪ್ರಶಾಂತ್ ಕಿಣಿ, ಜಂಟಿ ಕಾರ್ಯದರ್ಶಿ ಸುದರ್ಶನ್ ಬಿ., ಉಪಾಧ್ಯಕ್ಷರಾದ ರಂಜಿತ್ ಶೆಟ್ಟಿ, ರಾಹುಲ್ ಉದ್ಯಾವರ, ಗಣೇಶ್ ಮತ್ತು ಧನಂಜಯ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಐಎಂಆರ್ ಎ ಕರ್ನಾಟಕದ ರಾಜ್ಯಾಧ್ಯಕ್ಷ ರವಿಕುಮಾರ್ ಕೆ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಅಧ್ಯಕ್ಷರಾಗಿ ವಿವೇಕ್ ಜಿ ಸುವರ್ಣ, ಕಾರ್ಯದರ್ಶಿಯಾಗಿ ಖಾದರ್, ಖಜಾಂಚಿಯಾಗಿ ಇಮ್ರಾನ್ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಅಧ್ಯಕ್ಷರಾಗಿ ವಿವೇಶ್ ಜಿ ಸುವರ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.












