ಸಾವಯವ ನುಗ್ಗೆ ಕೃಷಿಕ ಬಸಯ್ಯ ಹಿರೇಮಠ ಇವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ

ಕುಷ್ಟಗಿ: ಸಾವಯವ ಕೃಷಿ ಮೂಲಕ ಗಮನ ಸೆಳೆದು, ನಂದಿ ಆಗ್ರೋ ಫಾರ್ಮ್ ಸ್ಥಾಪಿಸಿ ಸರ್ವಜನಿಕರಿಗೆ ಉಚಿತ ಮತ್ತು ರಿಯಾಯತಿ ದರದಲ್ಲಿ ಉತ್ಪನ್ನ ಮಾರಾಟಮಾಡುತ್ತಿರುವ ಕೃಷಿಕ ಬಸಯ್ಯ ಹಿರೇಮಠ ಇವರಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ನೀಡಲಾಗುವ ‘ಶ್ರೇಷ್ಠ ಉದ್ಯಮಿ’ ಪ್ರಶಸ್ತಿ ಲಭ್ಯವಾಗಿದೆ.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬಸಯ್ಯನವರು ನುಗ್ಗೆ ಕೃಷಿಯ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಇವರು ಪ್ರಸ್ತುತ ಗಂಗಾವತಿಯಲ್ಲಿ ವಾಸವಾಗಿದ್ದಾರೆ.

ನುಗ್ಗೆ ಕೃಷಿಯಲ್ಲಿ ಲಕ್ಷಾಂತರ ರೂ ವಹಿವಾಟು ಹೊಂದಿರುವ ಇವರು ನುಗ್ಗೆ ಎಣ್ಣೆ, ಪೌಡರ್, ಮಾತ್ರೆ ಮುಂತಾದ ಹಲವಾರು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.