ಕಾರ್ಕಳ: ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ನಿಲೆಬೆಟ್ಟು ಗುತ್ತುಮನೆ ನಿವಾಸಿ, ಹೆಸರಾಂತ ಸಾವಯವ ಕೃಷಿಕ ಭಾಸ್ಕರ್ ಹೆಗ್ಡೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ವೇಳೆ ನಡೆದಿದೆ.
ಭಾಸ್ಕರ್ ಹೆಗ್ಡೆ ಇಂದು ಮುಂಜಾನೆ ಮನೆಯಲ್ಲಿದ್ದ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಸಾವಯವ ಕೃಷಿಯಲ್ಲಿ ಮನೆಮಾತಾಗಿದ್ದ ಭಾಸ್ಕರ್ ಹೆಗ್ಡೆ ಅವರು ದುರ್ಗಾ ಪಂಚಾಯತ್ ನ ಸದಸ್ಯರಾಗಿದ್ದರು ಮತ್ತು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.












