ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ.ಫೌಂಡೇಶನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಮಂಗಳೂರು: ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವು ಮಂಗಳೂರಿನ ಅಳಕೆಯ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ನಡೆಯಿತು.

ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೆಕ್ಕ ಪರಿಶೋಧಕ ಕೆ.ಬಾಲಸುಬ್ರಮಣ್ಯನ್, ಪ್ರತಿಯೊಬ್ಬ ವ್ಯಕ್ತಿಗೂ ಅವಕಾಶಗಳು ಲಭಿಸುತ್ತದೆ. ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಸತತ ಅಭ್ಯಾಸ, ಕಠಿಣ ಪರಿಶ್ರಮ ನಿಷ್ಠೆಯಿಂದ ಕಾರ್ಯಪ್ರವೃತರಾದಾಗ ಜೀವನದಲ್ಲಿ ಯಶಸ್ಸುಗಳಿಸಬಹುದು ಎಂದರು.

ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಲೆಕ್ಕ ಪರಿಶೋಧಕರಾದ ಗೋಪಾಲ ಕೃಷ್ಣ ಭಟ್ ಮಾತನಾಡಿ, ಸತತ ಅಭ್ಯಾಸವೇ ಸಾಧನೆಯ ಹಾದಿ ತಲುಪಲು ಇರುವ ಎಕೈಕ ಮಾರ್ಗ. ನಿಖರವಾದ ಗುರಿ ಉದ್ದೇಶ ಮತ್ತು ನಿಭಾಯಿಸುತ್ತೇನೆಂಬ ಛಲ ಮೊದಲಾದವು ನಮ್ಮನ್ನು ಆ ಮಾರ್ಗದಲ್ಲಿ ಸಾಗಲು ಸಹಕರಿಸುತ್ತದೆ ಎಂದರು. ಬಳಿಕ ನೂತನ ಸಿಎ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ತ್ರಿಶಾ ಕ್ಲಾಸಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆಯಾದ ಶ್ರೀಮತಿ ಯಶಸ್ವಿನಿ ಯಶ್ಪಾಲ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪಾಯಲ್ ನಿರೂಪಿಸಿದರು, ಕಾವ್ಯ ವಂದಿಸಿದರು.