ಉಡುಪಿ: ಮಕ್ಕಳ ಸಂಖ್ಯೆ ಕೊರತೆಯ ಕಾರಣದಿಂದ ಉಡುಪಿ ವಲಯದ ಪಂಚನಬೆಟ್ಟು ವಿದ್ಯಾವರ್ಧಕ ಅನುದಾನಿತ ಪ್ರೌಢಶಾಲೆಯನ್ನು ಕಾರ್ಯಸಾಧುವಲ್ಲದ ಶಾಲೆಯೆಂದು ಸರ್ಕಾರ ಘೋಷಿಸಿದ್ದು, ಪ್ರಸಕ್ತ ಸಾಲಿನಿಂದ ಶಾಲೆಯ ಮಾನ್ಯತೆ ಹಿಂಪಡೆದು, ಶಾಲೆ ಮುಚ್ಚಲು ಆದೇಶಿಸಲಾಗಿರುತ್ತದೆ.
ಆದ್ದರಿಂದ ಪ್ರಸಕ್ತ ಸಾಲಿನಿಂದ ಈ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಿದ್ದಲ್ಲಿ ಸಂಬಂಧಪಟ್ಟ ಪೋಷಕರೇ ಜವಾಬ್ದಾರರಾಗಿರುತ್ತಾರೆ ಎಂದು ಉಡುಪಿ ವಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.