ಮಣಿಪಾಲ: ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಾಣುವ ಯುವತಿ/ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ನೆರವಾಗುವ ಒಂದು ವರ್ಷದ ನರ್ಸರಿ / ಮಾಂಟೆಸ್ಸರಿ ಕೋರ್ಸ್‍ನ್ನು ಮಣಿಪಾಲದ ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ:
ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ ಪಡೆಯುವಲ್ಲಿ ಸಹಕಾರ ನೀಡುತ್ತಿದೆ.
ಇಲ್ಲಿನ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಯ ಹಲವು ಪ್ರತಿಷ್ಠಿತ ಹಾಗೂ ಹೆಸರುವಾಸಿ ಶಿಕ್ಷಣ (CBSE/ICSE/STATE) ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ ಮೂಲಕ ಭವಿಷ್ಯ ರೂಪಿಸಿಕೊಂಡಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿಯಿರುವ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿರುವ ಮಹಿಳೆಯರು/ಗೃಹಿಣಿಯರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಏನಿದು ಮಾಂಟೆಸ್ಸರಿ ಕೋರ್ಸ್:
ಮಾಂಟೆಸ್ಸರಿ ವಿಧಾನದ ತರಬೇತಿಯು ಎಳೆಯ ಮಕ್ಕಳ ಶಿಕ್ಷಕ ವೃತ್ತಿಯಲ್ಲಿ ಒಂದು ಆಕರ್ಷಕ, ಮನಶಾಸ್ತ್ರೀಯ ಆಧಾರದ ತರಬೇತಿಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಹಳ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇಲ್ಲಿ ನಿರುದ್ಯೋಗಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ತರಬೇತಿ ಪಡೆಯದ ಶಿಕ್ಷಕಿಯರಿಗೂ ಅವಕಾಶವಿದೆ. ತರಬೇತಿ ಬಳಿಕ ಆನೇಕ ಶಾಲೆಗಳಲ್ಲಿ ಸಂದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅಲ್ಲದೇ ತಮ್ಮದೇ ಆದ ನರ್ಸರಿ ಸ್ಕೂಲ್‍ನ್ನು ನಡೆಸುವ ಸಾಮರ್ಥ್ಯವನ್ನು ಪಡೆಯುತ್ತಾರೆ.
ಈ ಸಂಸ್ಥೆಯು 2022-23ರ ಸಾಲಿನಲ್ಲಿ 90%ರಷ್ಟು ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.
2023-24ರ ಸಾಲಿನ ಸೀಟುಗಳು ಲಭ್ಯವಿದ್ದು ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9901722527 ದೂರವಾಣಿಯನ್ನು ಸಂಪರ್ಕಿಸಬಹುದು.