ಬೆಂಗಳೂರು: ಕೋವಿಡ್ ಪಾಸಿಟಿವಿ ರೇಟ್ ಶೇ.1 ಕ್ಕಿಂತ ಕಡಿಮೆ ಇರುವ ಜಿಲ್ಲೆಯಗಳಲ್ಲಿ ಅಕ್ಟೋಬರ್ 1 ರಿಂದ ಶೇ. 100 ರಷ್ಟು ಥಿಯೇಟರ್ ಗೆ ಅವಕಾಶ ನೀಡಲಾಗುತ್ತದೆ. ಕನಿಷ್ಠ 1 ಡೋಸ್ ಹಾಕಿಸಿಕೊಂಡವರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ನ ಇಳಿಮುಖ ಹಿನ್ನೆಲೆ ಕೋವಿಡ್ 19 ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಇಂದು ಸಿಎಂ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರನ್ನೊಳಗೊಂಡಂತೆ ಸಭೆ ನಡೆಸಿದರು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿ ದರ ಸರಾಸರಿ 0.66 ರಷ್ಟಿದೆ. ಆದ್ದರಿಂದ ಕೆಲವು ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಇದರಂತೆ ಶೇ.1ಕ್ಕಿಂತ ಪಾಸಿಟಿವಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ 100 ರಷ್ಟು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಪಾಸಿಟಿವಿ ದರ 2 ರಷ್ಟು ಆದರೆ ಸಿನಿಮಾ ಮಂದಿರಗಳೇ ಸ್ಥಗಿತ ಮಾಡ್ತೇವೆ. ನೈಟ್ ಕರ್ಫ್ಯೂ 9ರ ಬದಲು ರಾತ್ರಿ 10ರಿಂದ ಇರಲಿದೆ ಎಂದು ಸ್ಪಷ್ಟಪಡಿಸಿದರು.
1-5 ತರಗತಿ ಸದ್ಯಕ್ಕೆ ಓಪನ್ ಇಲ್ಲ:
1 ರಿಂದ 5ನೇ ತರಗತಿ ಸದ್ಯಕ್ಕೆ ಓಪನ್ ಇಲ್ಲ. 6-12 ನೇ ತರಗತಿಗಳಿಗೆ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಲಾಗುತ್ತದೆ. ಸೋಮವಾರದಿಂದ ಶುಕ್ರವಾರ ದವರೆಗೆ ಶಾಲಾ ಕಾಲೇಜಿಗೆ ಅನುಮತಿ ನೀಡಲಾಗುತ್ತದೆ ಎಂದರು. ದೇವಸ್ಥಾನಕ್ಕೆ ಅವಕಾಶ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ದೇವಸ್ಥಾನದ ಬಗ್ಗೆ ನಿರ್ಧಾರ ಮಾಡ್ತಾರೆ.
ಪಬ್, ಕ್ಲಬ್ ತೆರೆಯಲು ಗ್ರೀನ್ ಸಿಗ್ನಲ್:
ಚಿತ್ರಮಂದಿರಗಳಂತೆ ಅಕ್ಟೋಬರ್ 3ರಿಂದಲೇ ಪಬ್, ಕ್ಲಬ್ ತೆರೆಯಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಪಬ್ ಮತ್ತು ಕ್ಲಬ್ ಪ್ರವೇಶ ಮಾಡೋರಿಗೆ ಒಂದು ಡೋಸ್ ಲಸಿಕೆಯಾದ್ರೂ ಕಡ್ಡಾಯ ಎಂದರು.