ಉಡುಪಿ: ತೆಂಕುತಿಟ್ಟು ಯಕ್ಷಗಾನ ನಾಟ್ಯ ಉಚಿತ ತರಬೇತಿಯ ಹೊಸ ತರಗತಿಯ ಉದ್ಘಾಟನೆ

ಉಡುಪಿ: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಉಡುಪಿ ಸೋದೆ ಮಠದಲ್ಲಿ ನಡೆಯುತ್ತಿರುವ ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ತರಬೇತಿ ಕಾರ್ಯಕ್ರಮದ ನೂತನ ತರಗತಿಯ (ಬ್ಯಾಚ್) ಉದ್ಘಾಟನೆ ಮಂಗಳವಾರ ನಡೆಯಿತು.

ಪುರೋಹಿತರಾದ ಶಶಿಕಾಂತ ಭಟ್ ಮತ್ತು ಯಕ್ಷಗುರು ರಾಕೇಶ್ ರೈ ಅಡ್ಕ ನೂತನ ಬ್ಯಾಚ್ ಅನ್ನು ಉದ್ಘಾಟಿಸಿದರು.

 

ಬಳಿಕ ಮಾತನಾಡಿದ ಶಶಿಕಾಂತ ಭಟ್, ಹೆಜ್ಜೆಗಾರಿಕೆ ಕಲಿಕೆಗೆ ಆಸಕ್ತಿ, ಶ್ರದ್ಧೆ ಮುಖ್ಯ. ಇವುಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ತರಬೇತಿಯಲ್ಲಿ ಭಾಗವಹಿಸಿದರೆ, ಹೆಜ್ಜೆಗಾರಿಕೆ ಕಲೆಯನ್ನು ಯಶಸ್ವಿಯಾಗಿ ಕಲಿಯಬಹುದು ಎಂದರು.

ಕೆಎಂಸಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಸುನೀಲ್ ಮುಂಡ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿನಂದನ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ನೇಹಾ ಆಚಾರ್ಯ ವಂದಿಸಿದರು.

ಹೊಸ ತರಗತಿಯ ಸಮಯ ಪ್ರತಿ ಮಂಗಳವಾರ ಸಂಜೆ ಗಂಟೆ 5ರಿಂದ 6ರವರೆಗೆ ನಡೆಯಲಿದೆ. ಆಸಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರತಿಷ್ಠಾನದ ವತಿಯಿಂದ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ: ಸಂಖ್ಯೆ 9844212104 / 9663424981/ 9845150802 ಸಂಪರ್ಕಿಸಬಹುದು.