ಥಾಯ್ಲೆಂಡ್‌ನ ಒಪಾಲ್ ಸುಚಾತಾಗೆ ‘ವಿಶ್ವ ಸುಂದರಿ ಕಿರೀಟ’

ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ಅವರು 72ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದು, ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ‘ರನ್ನ‌ರ್ ಅಪ್’ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ಸಂಜೆ ಹೈದರಾಬಾದ್‌ನ ಹೈಟೆಕ್‌ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದ 72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಸುಚಾತಾ ಕಿರೀಟ ತಮ್ಮದಾಗಿಸಿಕೊಂಡರು. ಇನ್ನೂ ಭಾರತವನ್ನು ಪ್ರತಿನಿಧಿಸಿದ ನಂದಿನಿ ಗುಪ್ತಾ ಅವರು ಅಗ್ರ 8ರಲ್ಲಿ ಸ್ಥಾನ ಪಡೆಯುವ ಮುನ್ನವೇ ಹೊರಬಿದ್ದರು.

ವಿಜೇತರಿಗೆ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂ. ಬೆಲೆ ಬಾಳುವ ವಜ್ರದ ಕಿರೀಟ ಅವರ ಮುಡಿಗೆ ಸಿಂಗರಿಸಲಾಯಿತು. ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ಮೊದಲ ರನ್ನರಪ್‌ ಆದ್ರೆ, ಪೋಲೆಂಡಿನ ಪೊಲ್ಯಾಂಡ್‌ನ ಸುಂದರಿ 2ನೇ ರನ್ನರ್ ಅಪ್ ಹಾಗೂ ಕೆರೆಬಿಯನ್ ದ್ವೀಪದ ಸುಂದರಿ 3ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು.