ಲಸಿಕೆ ಪಡೆಯಲು ಇನ್ಮುಂದೆ ಆನ್ ಲೈನ್ ನೋಂದಣಿ ಕಡ್ಡಾಯವಲ್ಲ

ನವದೆಹಲಿ: ಕೋವಿಡ್ ಲಸಿಕೆ ಪಡೆಯಲು ಮುಂಚಿತವಾಗಿ ಆನ್‌ಲೈನ್‌ ನೋಂದಣಿ ಹಾಗೂ ಕಾಯ್ದಿರಿಸುವಿಕೆ ಇನ್ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಗ್ರಾಮೀಣ ಭಾಗದ ಜನತೆ ಲಸಿಕೆ ಪಡೆಯಲು ತೊಂದರೆ ಪಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟವರು ಆಯಾ ಲಸಿಕೆ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದು ಹೇಳಿದೆ.

ಈವರೆಗೆ ಲಸಿಕೆ ಪಡೆಯಲು ಕೋವಿನ್‌ ಆ್ಯಪ್‌ನಲ್ಲಿ ನೋಂದಣಿ ಮಾಡಬೇಕಿತ್ತು. ದಿನಾಂಕ ಗೊತ್ತುಪಡಿಸಿದ ಬಳಿಕ, ಆಯಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬೇಕಿತ್ತು.