ಕಾರ್ಕಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ, ಕಾರ್ಕಳ ಇದರ ವತಿಯಿಂದ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿನ ಹಾಗೂ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆನ್ ಲೈನ್ ‘ಮುದ್ದು ರಾಧೆ-ಕೃಷ್ಣ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಒಂದು ವರ್ಷದೊಳಗಿನ ಮಕ್ಕಳು ಹಾಗೂ 1ರಿಂದ 5 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯ ನಿಯಮಗಳು:
*ಗರಿಷ್ಠ ಒಂದು ನಿಮಿಷದೊಳಗಿನ ವಿಡಿಯೋ ಕಳುಹಿಸಬೇಕು.
*ವಿಡಿಯೋದೊಂದಿಗೆ ಮಗುವಿನ ಹೆಸರು, ವರ್ಷ, ಪೋಷಕರ ಹೆಸರು, ವಿಳಾಸ ಕಡ್ಡಾಯವಾಗಿ ನಮೂದಿಸಬೇಕು.
*ಎಡಿಟಿಂಗ್ ವಿಡಿಯೋ ಪರಿಗಣಿಸಲಾಗುವುದಿಲ್ಲ.
*ಕಾರ್ಕಳ ತಾಲೂಕಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶ.
*ಆಗಸ್ಟ್ 27ರ ಸಂಜೆ 7ಗಂಟೆಯೊಳಗೆ ವಿಡಿಯೋ ಕಳುಹಿಸಬೇಕು.
*ಪ್ರಥಮ, ದ್ವಿತೀಯ, ತೃತೀಯ ಹಾಗೂ 10 ಸಮಾಧಾನಕರ ಬಹುಮಾನ
*ಆಗಸ್ಟ್ 31 ಸಂಜೆ 6.30ಕ್ಕೆ ಕಾರ್ಕಳ ಆನೆಕೆರೆ ಚೇತನ ಶಾಲೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ನಂ.
98459 57408, 98446 00361, 99804 22418 ಸಂಪರ್ಕಿಸಬಹುದು.