ಸೆ. 1ರಿಂದ ಪದವಿ ಕಾಲೇಜುಗಳ ಆನ್ ಲೈನ್ ತರಗತಿ ಆರಂಭ

ಬೆಂಗಳೂರು: ಯುಜಿಸಿ ಸೂಚನೆಯ ಮೇರೆಗೆ ಸೆಪ್ಟೆಂಬರ್ 1ರಿಂದ ಪದವಿ ಕಾಲೇಜುಗಳ ಆನ್ ಲೈನ್ ತರಗತಿ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 1 ರಿಂದ ಕೊರೊನಾ ಮುಂಜಾಗೃತಾ ಕ್ರಮಗಳೊಂದಿಗೆ ಪದವಿ ಕಾಲೇಜುಗಳ ರೆಗ್ಯುಲರ್ ತರಗತಿಗಳು ಆರಂಭವಾಗಲಿದೆ ಎಂದು ತಿಳಿಸಿದೆ.