ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಿಲ್ಲಿಸಬೇಕು: ಸಚಿವ ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಎಲ್ ಕೆಜಿ, ಯುಕೆಜಿ ಸೇರಿದಂತೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಡೆಸುವುದನ್ನು ಇಂದಿನಿಂದಲೇ ಕೈಬಿಡಬೇಕು. ಜತೆಗೆ ಫೀಸ್ ಪಡೆಯುವುದನ್ನೂ ನಿಲ್ಲಿಸಬೇಕು ಎಂದು ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆನ್ ಲೈನ್ ತರಗತಿ‌ ನಡೆಸುವುದು ಕಷ್ಟಕರವಾಗಿದ್ದು, ಈಗಾಗಲೇ ದೂರುಗಳು ಕೇಳಿಬಂದಿದೆ. ಶಿಕ್ಷಣ ಎನ್ನುವುದು ಕೇವಲ ಸಿಲೆಬಸ್ ಮುಗಿಸುವುದಲ್ಲ, ಜ್ಞಾನವೃದ್ದಿ ಆಗಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಹೀಗಾಗಿ ಇಂದಿನಿಂದಲೇ ನಿಲ್ಲಿಸಬೇಕು. ಜತೆಗೆ ಆನ್ ಲೈನ್ ತರಗತಿಗಳಿಗೆ ಫೀಸ್ ತೆಗೆದುಕೊಳ್ಳುವುದನ್ನು ಕೂಡ ತಕ್ಷಣವೇ ನಿಲ್ಲಿಸಬೇಕು.  ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕದಲ್ಲಿ ಏರಿಕೆ ಮಾಡಬಾರದು ಎಂದರು.