ಬೈಕ್ ನಲ್ಲಿ ತಾಯಿಯ ಕೈಯಿಂದ ಜಾರಿಬಿದ್ದು ಒಂದು ವರ್ಷದ ಮಗು ಮೃತ್ಯು

ಮಂಡ್ಯ: ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ತಾಯಿಯ ಕೈಯಿಂದ ಜಾರಿ ಬಿದ್ದು ಒಂದು ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಮಂಡ್ಯ ತಾಲೂಕಿನ ಕಿರಂಗಂದೂರು ಗ್ರಾಮದ ಬಳಿ ನಡೆದಿದೆ.

ಚಂದಗಾಲು ಗ್ರಾಮದ ಶಿವಕುಮಾರ್- ರಂಜಿತಾ ದಂಪತಿ ಮದುವೆ ಕಾರ್ಯಕ್ರಮಕ್ಕೆ ಬೈಕ್​ನಲ್ಲಿ ಹೋಗಿದ್ದರು. ಅಲ್ಲಿಂದ ವಾಪಸ್ಸಾಗುವ ವೇಳೆ ರಸ್ತೆ ಮಧ್ಯೆ ಬಂದ ಹಂಪ್​ನಲ್ಲಿ ಮಗು ತಾಯಿಯ ಕೈತಪ್ಪಿ ಕೆಳಗೆ ಬಿದ್ದಿದೆ.

ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಮಗುವನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.