ಕೊಪ್ಪಳ: ಏಕರೂಪ ನಾಗರಿಕ ಸಂಹಿತೆ ಒಂದಲ್ಲ ಒಂದು ದಿನ ದೇಶದಲ್ಲಿ ಜಾರಿಯಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಹೇಳಿದ್ದಾರೆ.
“ಏಕರೂಪ ನಾಗರಿಕ ಸಂಹಿತೆ ತರಲು ಬಿಜೆಪಿ ಬದ್ಧವಾಗಿದೆ ಮತ್ತು ಅದನ್ನು ಜಾರಿಗೆ ತರಲು ಹೊರಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ್ದು ಬಿಜೆಪಿ”.
ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಿದೆ ಎಂದ ಅವರು, “ಕಾನೂನು ಎಲ್ಲ ನಾಗರಿಕರಿಗೂ ಸಮಾನವಾಗಿರಬೇಕು ಎಂಬುದು ಪಕ್ಷದ ನಿಲುವು ಪ್ರಸ್ತುತ ಯಾವುದೇ ಕೋಮು ಅಥವಾ ಧಾರ್ಮಿಕ ಪೂರ್ವಾಗ್ರಹವಿಲ್ಲದೆ ಅಪರಾಧ ಕೃತ್ಯಗಳಿಗೆ ಸಮಾನವಾಗಿ ಶಿಕ್ಷೆಯನ್ನು ನೀಡಲಾಗುತ್ತಿದೆ. ಅದೇ ರೀತಿ ನಾಗರಿಕ ಸಮಸ್ಯೆಗಳಿಗೆ ಸಂಬಂಧಿಸಿದ ಅಪರಾಧಿಗಳನ್ನು ಸಮಾನವಾಗಿ ಪರಿಗಣಿಸಬೇಕು,” ಇದು ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಹಿಂದಿನ ಉದ್ದೇಶವಾಗಿದೆ”.
ಸಂವಿಧಾನದ 44 ನೇ ವಿಧಿಯು ದೇಶದಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರವೇ ಆಗಿರಲಿ ಏಕರೂಪದ ನಾಗರಿಕ ಕಾನೂನುಗಳನ್ನು ಜಾರಿಗೆ ತರುವುದು ಸರ್ಕಾರದ ಕರ್ತವ್ಯ ಎಂದು ವಿವರಿಸುತ್ತದೆ ಎಂದಿರುವ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭವ್ಯ ಶಂಕುಸ್ಥಾಪನೆ ಸಮಾರಂಭಕ್ಕೆ ಎಲ್ಲರೂ ಸಾಕ್ಷಿಯಾಗಿದ್ದಾರೆ. ಈಗ ಅಲ್ಲಿ ಮಂದಿರ ನಿರ್ಮಾಣವಾಗುತ್ತಿದೆ, ಬಿಜೆಪಿ ಎಲ್ಲಾ ಭರವಸೆಗಳನ್ನು ಈಡೇರಿಸಿದೆ, ಏನು ಹೇಳುತ್ತೆವೆಯೋ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದರು.
ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಂವಿಧಾನ ಮತ್ತು ಸರ್ವೋಚ್ಛ ನ್ಯಾಯಾಲಯ ಏನು ಹೇಳುತ್ತದೆ?
ದ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ ಭಾಗ 4-ಆರ್ಟಿಕಲ್ 44 ರ ಅಡಿಯಲ್ಲಿ, ಭಾರತೀಯ ಸಂವಿಧಾನವು ತನ್ನ ನಾಗರಿಕರಿಗಾಗಿ ಏಕರೂಪ ನಾಗರಿಕ ಸಂಹಿತೆಯ ಸ್ಥಾಪನೆಯನ್ನು ಪ್ರತಿಪಾದಿಸುತ್ತದೆ.
ಆರ್ಟಿಕಲ್ 44 ಪ್ರಕಾರ:
“ಭಾರತವು ತನ್ನ ನಾಗರಿಕರನ್ನು ಸುರಕ್ಷಿತವಾಗಿಸುವ ಪ್ರಯತ್ನದಲ್ಲಿ, ಭಾರತದಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕು”
ಸರಳಾ ಮುದ್ಗಲ್ ವಿರುದ್ದ ಭಾರತದ ಒಕ್ಕೂಟ ಎಐಆರ್ 1995 ಎಸ್.ಸಿ 1531, ಜಾನ್ ವಲ್ಲಮತ್ತಮ್ ವಿರುದ್ದ ಭಾರತದ ಒಕ್ಕೂಟ ಎಐಆರ್ 2003 ಎಸ್.ಸಿ 2902 ಮತ್ತು ಮೊಹಮ್ಮದ್ ಅಹಮದ್ ಖಾನ್ ವಿರುದ್ದ ಶಾ ಬಾನೋ ಬೇಗಂ 1985 ಎಸ್.ಸಿ.ಆರ್ (3) 844 ಈ ಮೂರೂ ಪ್ರಕರಣಗಳಲ್ಲಿ, ಭಾರತ ದೇಶದ ಸರ್ವೋಚ್ಛ ನ್ಯಾಯಾಲಯವು ಏಕರೂಪ ನಾಗರಿಕ ಸಂಹಿತೆಯ ಅವಶ್ಯಕತೆಯನ್ನು ಪುನರುಚ್ಛರಿಸುತ್ತಾ ತನ್ನ ತೀರ್ಪನ್ನು ನೀಡಿದೆ.
ಪ್ರಸ್ತುತ ದೇಶದಲ್ಲಿ ಮದುವೆ, ಆಸ್ತಿ ಹಂಚಿಕೆ ಮತ್ತು ವಿವಾಹ ವಿಚ್ಛೇದನದ ಕಾನೂನುಗಳು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮಾಜಕ್ಕೆ ಭಿನ್ನ ಭಿನ್ನವಾಗಿದ್ದು, ಮುಸ್ಲಿಂ ಮತ್ತು ಕ್ರೈಸ್ತ ಸಮಾಜವು ಪ್ರತ್ಯೇಕ ಕಾನೂನನ್ನು ಅಳವಡಿಸಿಕೊಂಡಿದೆ.