ಬೆಂಗಳೂರು: ಸೌತ್ ಆಫ್ರಿಕಾ ಸಹಿತ ಜಗತ್ತಿನ ಕೆಲವೊಂದು ದೇಶಗಳಲ್ಲಿ ಕೊರೊನಾ ಹೊಸ ತಳಿ B.1.1.529 ಓಮ್ರಿಕಾನ್ ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಎಚ್ಚರ ವಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಕೆಲವು ದಿನಗಳಿಂದ ಸೌತ್ ಆಫ್ರಿಕಾ, ಹಾಂಕಾಂಗ್, ಬೋಟ್ಸ್ವಾನಾದಲ್ಲಿ ಹೊಸ ತಳಿ B.1.1.529 , ಓಮ್ರಿಕಾನ್ ಕಂಡುಬಂದಿದೆ. ಇದಕ್ಕೂ ಮೊದಲು ಕೊರೊನಾ ರೂಪಾಂತರಿ ಡೆಲ್ಟಾ 9 ತಿಂಗಳಿಂದ ಇತ್ತು. ಆದ್ರೆ ಇದು ಅದಕ್ಕಿಂತ ತೀವ್ರವಾದ ವೈರಸ್ ಅಂತಾ ಹೇಳಲಾಗ್ತಿದೆ. ರಾಜ್ಯದಲ್ಲಿ ಈ ವಿಚಾರವಾಗಿ ಆತಂಕ ಬೇಡ ಆದ್ರೆ ಜಾಗೃತೆ ಇರಲಿ ಎಂದರು.
ಇನ್ನು ಹೊರ ದೇಶಗಳಿಂದ ಆಗಮಿಸುವವರಿಗೆ ಮತ್ತೆ ತೀವ್ರ ತಪಾಸಣೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಅವರ ರಿಪೋರ್ಟ್ ನೆಗೆಟಿವ್ ಬರೋವರೆಗೂ ಅವರನ್ನು ಹೊರಗಡೆ ಬಿಡೋದಿಲ್ಲ. ನೆಗೆಟಿವ್ ಬಂದ ನಂತರ ಅವರು 7 ದಿನ ಕ್ವಾರಂಟೀನ್ನಲ್ಲಿ ಇರಬೇಕು ಎಂದಿದ್ದಾರೆ. ಇದರ ಗುಣಲಕ್ಷಣಗಳು ಡೆಲ್ಟಾಗೂ ಹೋಲಿಕೆಯಿವೆ. ಆದ್ರೆ ಇದು ಅತಿ ವೇಗವಾಗಿ ಹರಡುತ್ತದೆ ಎಂದು ಮಾಹಿತಿಯಿದೆ ಎಂದರು.