ಹೆಬ್ರಿ: ವಾಹನಚಲಾಯಿಸುತ್ತಿದ್ದಾಗ ಹಸುವೊಂದು ಅಡ್ಡಬಂತೆಂದು ಅದನ್ನು ತಪ್ಪಿಸಲು ಹೋಗಿ ಒಮ್ನಿಯೊಂದು ಹೊಂಡಕ್ಕೆ ಬಿದ್ದ ಘಟನೆ ಹೆಬ್ರಿಯ ಎಸ್ಆರ್ ಶಾಲೆಯ ಬಳಿ ನಡೆದಿದೆ.
ಮಣಿಪಾಲದಿಂದ ಹರಿಹರ ಕಡೆಗೆ ಹೋಗುತ್ತಿದ್ದ ಓಮ್ನಿಯು ಹಸುವನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.