ಪೆರ್ಡೂರು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೋರ್ವರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪೆರ್ಡೂರು ಮೇಲ್ಪೇಟೆಯ ಬಿಎಮ್ ಸ್ಕೂಲ್ ಎದುರು ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಅಲಂಕಾರು ನಿವಾಸಿ 70 ವರ್ಷದ ಮಂಜಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಪೆರ್ಡೂರಿನಿಂದ ಹಿರಿಯಡಕ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಒಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜಯ್ಯ ಶೆಟ್ಟಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ರಸ್ತೆಗೆ ಬಿದ್ದ ಮಂಜಯ್ಯ ಶೆಟ್ಟಿ ಅವರ ತಲೆ ಮೇಲೆ ಟಿಪ್ಪರ್ ನ ಚಕ್ರ ಹರಿದಿದೆ. ಇದರಿಂದ ತಲೆ ಸಂಪೂರ್ಣ ಛಿದ್ರಗೊಂಡಿದ್ದು, ಸ್ಥಳದಲ್ಲೆ ಮೃತರಾಗಿದ್ದಾರೆ.
ಟಿಪ್ಪರ್ ಚಾಲಕ ಪೆರ್ಡೂರಿನ ಗ್ಯಾರೇಜ್ ಒಂದರಲ್ಲಿ ಚಕ್ರ ಬದಲಾಯಿಸಿಕೊಂಡು ಹಿರಿಯಡಕ ಕಡೆಗೆ ಸಾಗುತ್ತಿದ್ದನು. ಅಪಘಾತ ನಡೆದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.