ಬೈಕ್ ಪ್ರಿಯರಿಗೊಂದು ಸಂತಸದ ಸುದ್ದಿ, ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಜನವರಿಯಲ್ಲಿ ಬಿಡುಗಡೆಯಾಗಿದೆ.
ಈಗಾಗಲೇ ಮುಂಬೈ,ದೆಹಲಿ ಮೊದಲಾದ ಪ್ರಮುಖ ನಗರಗಳಲ್ಲಿ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಸಂಚಲನ ಸೃಷ್ಟಿಸಿದೆ. ಅಲ್ಲದೇ ಇದೀಗ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೂಡ ಕಡಿಮೆಯಾಗಿದ್ದು ಜೇಬಿಗೆ ಅಂತಹ ಹೊರೆ ಬೀಳುವುದಿಲ್ಲ.
ಕೇಂದ್ರ ಸರ್ಕಾರಾ ಹಾಗೂ GST ಕೌನ್ಸಿಲ್ ಎಲೆಕ್ಟ್ರಿಕ್ ವಾಹನದ ಮೇಲಿ 12% GST(ತೆರಿಗೆ)ಯನ್ನು 5% ಕ್ಕೆ ಇಳಿಸಲಾಗಿದೆ. ಒಕಿನಾವ ಸ್ಕೂಟರ್ ಬೆಲೆಯಲ್ಲಿ ಕನಿಷ್ಠ 3,400 ರೂಪಾಯಿಂದ 8,600 ರೂಪಾಯಿ ವರೆಗೆ ಇಳಿಕೆಯಾಗಿದೆ. ಒಕಿನಾವಾ ಸ್ಕೂಟರ್ನಲ್ಲಿ i-ಪ್ರೈಸ್+, ರಿಡ್ಜ್+, ರಿಡ್ಜ್, ಪ್ರೈಸ್, ರೈಸ್ ಹಾಗೂ ರಿಡ್ಜ್ 30 ವೇರಿಯೆಂಟ್ ಲಭ್ಯವಿದೆ.
ಏನ್ ಸ್ಪೆಷಲ್:
ಅಂದಹಾಗೆ ಒಕಿನಾವಾ ಸ್ಕೂಟರ್ ಸಂಪೂರ್ಣ ಚಾರ್ಜ್ ಆಗಲು 3 ಗಂಟೆ ಸಮಯ ತೆಗೆದುಕೊಳ್ಳಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿ.ಮೀ ಪ್ರಯಾಣ ಮಾಡುತ್ತದೆ . 77 ಕಿಲೋಮೀಟರ್ ಪ್ರತಿ ಗಂಟೆಗೆ ವೇಗ ನೀಡುತ್ತದೆ. ಈ ಸ್ಕೂಟರ್ ಐ ಪ್ರೈಸ್ ಬೆಲೆ(ಹಳೇ ಬೆಲೆ) 1.15 ಲಕ್ಷ ರೂಪಾಯಿ.












