ಉಡುಪಿ: ಕಳೆದ ಮೂರು ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಗಾಳಿಮಳೆಗೆ ಕಾಪು ತಾಲ್ಲೂಕಿನ ಮಟ್ಟು ಗ್ರಾಮದ ಸರ್ಕಾರಿ ಹಿರಿಯ ಪಾರ್ಥಮಿಕ ಶಾಲೆಯ ಮೇಲೆ ಮರವೊಂದು ಬಿದ್ದಿದ್ದು, ಇದರಿಂದ ಶಾಲೆಯ ಒಂದು ಭಾಗ ಸಂಪೂರ್ಣ ಹಾನಿಗೊಂಡಿದೆ.
ಆದರೆ ವಿಪರ್ಯಾಸ ಏನೆಂದರೆ ಶಾಲೆಗೆ ಮರ ಬಿದ್ದು ಮೂರ್ನಾಲ್ಕು ದಿನಗಳಾದರೂ ಯಾವುದೇ ಒಬ್ಬ ಅಧಿಕಾರಿ ಇತ್ತಾ ಸುಳಿದಿಲ್ಲ. ಯಾವುದೇ ಕ್ರಮ ಕೈಗೊಳ್ಳದ ಸ್ಥಳೀಯಾಡಳಿತ ವಿರುದ್ಧ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.