ಕೆಮ್ಮಣ್ಣು: ನಿಟ್ಟೆ ರೋಟರಿ ಕ್ಲಬ್ಬಿನ ಅಂಗಸಂಸ್ಥೆಯಾದ ಕೆಮ್ಮಣ್ಣು ರೋಟರಿ ಸಮುದಾಯದಳದ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲಾ ಉಪಾಧ್ಯಕ್ಷ ರೋ. ಸಚ್ಚಿದಾನಂದ ನಾಯಕ್, 34 ವರ್ಷಗಳ ಇತಿಹಾವಿರುವ ಈ ಸಂಸ್ಥೆ ರೋಟರಿ ಜಿಲ್ಲೆ 3182 ಇದಕ್ಕೆ ಕೀರ್ತಿಪ್ರಾಯವಾಗಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ನಿರಂತರ ಸಕ್ರಿಯವಾಗಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಹೊಸ ಪದಾಧಿಕಾರಿಗಳು ಈ ಪರಂಪರೆಯನ್ನು ಇನ್ನೂ ಹೆಚ್ಚಿನ ಉತ್ಸಾಹದಿಂದ ನಡೆಸಿಕೊಂಡು ಹೋಗಲಿ ಎಂದು ಹಾರೈಸಿದರು.
ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಆಚಾರ್ಯ, ಕಾರ್ಯದರ್ಶಿಯಾಗಿ ಪ್ರದೀಪ ಸುವರ್ಣ ಆಯ್ಕೆಯಾದರು. ನೂತನ ತಂಡಕ್ಕೆ ವಲಯ 5ರ ಎಜಿ ರೋ. ಡಾ. ಶಶಿಕಾಂತ ಕರಿಂಕ ಪ್ರಮಾಣವಚನ ಮಾಡಿಸಿದರು.
ರೋ. ಸಚ್ಚಿದಾನಂದ ನಾಯಕ್ ಅವರನ್ನು ಏಜಿಯವರು ಸನ್ಮಾನಿಸಿದರು.
ನಿಟ್ಟೆ ರೋಟರಿ ಅಧ್ಯಕ್ಷ ಡಾ. ಸುದೀಪ್ ಕೆ.ಪಿ., ಆರ್.ಸಿ.ಸಿ. ನಿರ್ದೇಶಕ ರೋ. ವೆಂಕಟಕೃಷ್ಣ ಕೆಮ್ಮಣ್ಣು, ಜಿಲ್ಲಾ ಪ್ರತಿನಿಧಿ ನಾಗರಾಜ್, ರೋಟರಿ ಸಭಾಪತಿ ರೋ. ಕೆ. ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಅಧ್ಯಕ್ಷ ಕೃಷ್ಣಾನಂದ ರಾವ್ ಸ್ವಾಗತಿಸಿದರು. ಕಾ ರ್ಯದರ್ಶಿ ಉಮೇಶ್ ಕೋಟ್ಯಾನ್ ವರದಿ ಮಂಡಿಸಿದರು. ಕಾರ್ಯದರ್ಶಿ ಪ್ರದೀಪ ಸುವರ್ಣ ವಂದಿಸಿದರು.












