ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ನಟನೆಯ “ಭರಾಟೆ” ಸಿನಿಮಾ ಈ ವಾರ ತೆರೆಕಾಣುತ್ತಿದೆ.
ಅ.18 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಈ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದು ಭಾರಿ ಕುತೂಹಲ ಮೂಡಿಸಿದೆ.
ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ಭರಾಟೆ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಸಾಯಿಕುಮಾರ್, ಅಯ್ಯಪ್ಪ ಹಾಗೂ ರವಿಶಂಕರ್ ಸಹೋದರರು ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸಿರುವುದು ವಿಶೇಷ.
ಮಾಸ್ ಸಿನಿಮಾ ಮಿಸ್ ಮಾಡ್ಕೊಬೇಡಿ:
ಇದೊಂದು ಪಕ್ಕಾ ಮಾಸ್ ಕಥನ ಹೊಂದಿರೋ ಚಿತ್ರ. ಶ್ರೀಮುರಳಿ ಈ ಹಿಂದೆ ಎಂದೂ ನಟಿಸದ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಆ ಛಾಯೆಯೇ ಕುಟುಂಬ ಸಮೇತರಾಗಿ ಪ್ರೇಕ್ಷಕರನ್ನೆಲ್ಲ ಚಿತ್ರಮಂದಿರದತ್ತ ಕರೆತರುವಷ್ಟು ಶಕ್ತವಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಆದರೆ, ಇದರಲ್ಲಿರೋ ಮಾಸ್ ಸನ್ನಿವೇಶಗಳು ಮಾತ್ರ ಬೇರೆಯದ್ದೇ ದಿಕ್ಕಿನಲ್ಲಿವೆ.ಈ ವಾರ ಬಹುನಿರೀಕ್ಷಿತ ಚಿತ್ರವಾದ “ಭರಾಟೆ”ನೋಡಲು ಮರೆಯದಿರಿ.