ಉಡುಪಿ: ಅ. 12, 13ರಂದು “ಸಿಂಡ್ ವಾಹನ ಮೇಳ”

ಉಡುಪಿ:  ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ 1 ಮತ್ತು 2 ರ ವತಿಯಿಂದ ಇದೇ 12 ಮತ್ತು 13ರಂದು ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಸಿಂಡ್ ವಾಹನ ಮೇಳವನ್ನು ಆಯೋಜಿಸಲಾಗಿದೆ.
ಕಳೆದ 3 ವರ್ಷಗಳಿಂದ ಸಿಂಡ್ ವಾಹನ ಮೇಳವು ಉಡುಪಿಯಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿದೆ . ಈ ಬಾರಿಯು ದೇಶದ ಪ್ರಮುಖ ಕಾರು ಕಂಪೆನಿಗಳಾದ ಬಿಎಂಡಬ್ಲ್ಯೂ, ಹೊಂಡಾ, ಹ್ಯುಂಡೈ, ಮಾರುತಿ, ನೆಕ್ಸಾ, ಫೋರ್ಡ್, ರೆನೋಲ್ಟ್ , ಸ್ಕೋಡಾ, ಟೊಯಟಾ, ಮಹೀಂದ್ರಾ, ಐಸುಝು, ದ್ವಿಚಕ್ರ ವಾಹನಗಳಲ್ಲಿ ರೋಯಲ್ ಎನ್ ಫೀಲ್ಡ್  ಮೇಳದಲ್ಲಿ ಭಾಗವಹಿಸುತ್ತಿವೆ.
ತ್ವರಿತ ಸಾಲ ಮಂಜೂರಾತಿಗೆ ಬೇಕಾಗುವ ದಾಖಲೆ:
ತ್ವರಿತ ಸಾಲ ಮಂಜೂರಾತಿಗಾಗಿ ಗುರುತು ಪತ್ರ (ಪಾನ್‍ಕಾರ್ಡ್/ ಆಧಾರ್ ಕಾರ್ಡ್/ ವೋಟರ್ ಕಾರ್ಡ್/ ಪಾಸ್‍ ಪೋರ್ಟ್ ಪ್ರತಿ), 2 ಪಾಸ್ ಪೋರ್ಟ್ ಅಳತೆಯ ಫೋಟೋ, 3 ವರ್ಷದ ಐಟಿ ರಿಟರ್ನ್/ ಫಾರ್ಮ್ 16 ಮತ್ತು 6 ತಿಂಗಳ ಸಂಬಳ ಸ್ಲಿಪ್ ಹಾಜರುಪಡಿಸಬೇಕು.
ವಿಶೇಷ ಆಕರ್ಷಣೆ:
ಉಚಿತ ಪ್ರವೇಶ, ವಾಹನ ಟೆಸ್ಟ್ ಡ್ರೈವ್ ಸೌಲಭ್ಯ, ಸಂಸ್ಕರಣ ಶುಲ್ಕದಲ್ಲಿ ರಿಯಾಯಿತಿ, ಜಾಮೀನಿನ ಆವಶ್ಯಕತೆ ಇಲ್ಲ, ಪೂರ್ವ ಪಾವತಿ ದಂಡವಿಲ್ಲ, ಕೇವಲ ಶೇ. 15 ಪಾವತಿಸಿ ಉಳಿದ ಹಣವನ್ನು ಮಾಸಿಕ 84 ಕಂತುಗಳಲ್ಲಿ ಮರು ಪಾವತಿ, ಆಕರ್ಷಕ ದರದಲ್ಲಿ ತ್ವರಿತ ಸಾಲ ಸ್ಥಳದಲ್ಲೆ  ನೀಡಲಾಗುವುದು. ಡೀಲರ್ಸ್ ವತಿಯಿಂದ ವಿನಿಮಯ ಬೋನಸ್, ರಿಯಾಯಿತಿ, ಆಕರ್ಷಕ ಸೌಲಭ್ಯಗಳು ಲಭಿಸಲಿವೆ. ಅದೃಷ್ಟ ಭೇಟಿದಾರರಿಗೆ ಆಕರ್ಷಕ ಉಡುಗೊರೆ ನೀಡಲಾಗುವುದೆಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.
ವಾಹನ ಮೇಳಕ್ಕೆ ಚಾಲನೆ:
ಅ. 12ರಂದು ಬೆಳಿಗ್ಗೆ 10ಗಂಟೆಗೆ ಡಾ. ಟಿ.ಎಂ.ಎ.ಪೈ ಫೌಂಡೇಶನಿನ ಕಾರ್ಯದರ್ಶಿ ಟಿ.ಅಶೋಕ್ ಪೈ ಮೇಳಕ್ಕೆ ಚಾಲನೆ ನೀಡುವರು. ಸಿಂಡಿಕೇಟ್ ಬ್ಯಾಂಕ್ ವಲಯ ಪ್ರಬಂಧಕ ಭಾಸ್ಕರ ಹಂದೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ನೊಂದಾಯಿತ ಕಚೇರಿಯ ಮಹಾ ಪ್ರಬಂಧಕ ಎಸ್.ಎಸ್.ಹೆಗ್ಡೆ , ಗಿರಿಧರ್ ವಿ.ಎಂ ಉಪಸ್ಥಿತರಿರುವರು ಎಂದು ಸಿಂಡಿಕೇಟ್ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ಕ್ಷೇತ್ರಿಯ ಪ್ರಬಂಧಕರಾದ ಸುಜಾತಾ, ರಾಮ ನಾಯ್ಕ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.