ಅ.12,13: ಮಂಗಳೂರಿನ ಬೆಂದೂರ್ ನಲ್ಲಿ “ಪಾಪ್ ಅಪ್ ಮಾರುಕಟ್ಟೆ” ಆರಂಭ: ಬನ್ನಿ ಪಾಲ್ಗೊಳ್ಳಿ, ಖರೀದಿಸಿ

ಮಂಗಳೂರು : ಪಾಪ್ ಅಪ್GB ಮಾರುಕಟ್ಟೆ ಮಂಗಳೂರು ಅ.12 ಮತ್ತು 13 ರಂದು ನಗರದ ಬೆಂದೂರ್ ನ ಸೈಂಟ್ ಸೆಬಾಸ್ಟಿಯನ್ ಹಾಲ್‍ನಲ್ಲಿ  ಅಲ್ಪ ಬೆಲೆಯ ಮಾರುಕಟ್ಟೆಯನ್ನು 4ನೇ ಬಾರಿಗೆ ಆಯೋಜಿಸಿದೆ.

ಸಂಸ್ಥೆಯು ಸ್ಥಳೀಯ ಜನರಿಗೆ ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸುವ ಸಲುವಾಗಿ ಈ ವೇದಿಕೆ ಆಯೋಜಿಸಿದೆ.

 

ಏನೇನ್ ವಿಶೇಷವಿದೆ?

ಬಟ್ಟೆ, ಚೀಲಗಳು, ಫ್ಯಾಷನ್ ಬಿಡಿಭಾಗಗಳು, ಮನೆಯ ಅಲಂಕಾರಗಳು, ವೈಯಕ್ತಿಕ ನೈರ್ಮಲ್ಯ, ಬೇಕರಿ, ಆಹಾರ ಮಳಿಗೆಗಳು ಮುಂತಾದ 54ಕ್ಕೂ ಮೇಲ್ಪಟ್ಟು ಗೃಹ ಉದ್ಯಮಗಳ ಮಳಿಗೆಗಳು ಈ ಬ್ರಹತ್ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಎರಡೂ ದಿನಗಳಲ್ಲಿ ಮಕ್ಕಳಿಗಾಗಿ ವಿವಿಧ ವಿನೋದಾವಳಿಗಳೊಂದಿಗೆ, ಮಕ್ಕಳ ಚಟುವಟಿಕೆಯ ವಲಯವನ್ನು ಹೊಂದಿದ್ದು ಕಲಿಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೂಡ ಇಲ್ಲಿದೆ.

 

ಫುಡ್ ಕೌಂಟರ್: ನೃತ್ಯ ವೈವಿದ್ಯ:

ಶನಿವಾರ ಸಂಜೆ ಲೈವ್ ಸಂಗೀತ ಹಾಗೂ ರವಿವಾರ ಸಂಜೆ ಫಿಟ್ನೆಸ್ ವಿನೋದ ನೃತ್ಯ ಕೂಡ ಇಲ್ಲಿ ಸೆಟ್ಟೇರಲಿದೆ. ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಖಾದ್ಯಗಳೊಂದಿಗೆ ವಿವಿಧ ಆಹಾರ ಕೌಂಟರ್‍ಗಳನ್ನು ಸಹ ಈ ಕಾರ್ಯಕ್ರಮ ಹೊಂದಿದ್ದು ಸಾರ್ವಜನಿಕರನ್ನು ಆಕರ್ಷಿಸಲಿದೆ.

ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು  ಬೆಳಗ್ಗೆ 11ರಿಂದ ಸಂಜೆ 9ರ ವರೆಗೆ ಮಾರ್ಕೆಟ್ ತೆರೆದಿರುತ್ತದೆ. ಸ್ಥಳೀಯ ಜನರು ಭಾಗವಹಿಸಿ ಸೇವೆ, ಮನೋರಂಜನೆ ಪಡೆದುಕೊಳ್ಳಬಹುದು.