ಆಕ್ಷೇಪಣೆ ಆಹ್ವಾನ

ಉಡುಪಿ: ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರು ಮಣಿಪಾಲ-ಪೆರಂಪಳ್ಳಿ ರಸ್ತೆಯ 4 ನೇ ಅಡ್ಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ಶಾಖಾ ಕಟ್ಟಡಕ್ಕೆ ಹೋಗುವ ರಸ್ತೆಗೆ ಓಂ ಶಾಂತಿ ರಸ್ತೆ ಎಂದು ಹಾಗೂ ಅದಮಾರು ಮಠದ ನರಹರಿ ಪೀಠಮ್ ವ್ಯವಸ್ಥಾಪಕರು ದೀನದಯಾಳ್ ವೃತ್ತ ಚಿತ್ತರಂಜನ್ ಸರ್ಕಲ್‌ನಿಂದ ಹೋಟೆಲ್ ವುಡ್‌ಲ್ಯಾಂಡ್ ಮೂಲಕ ರಥಬೀದಿ ತಲುಪುವ ಮಾರ್ಗಕ್ಕೆ ಶ್ರೀ ಶ್ರೀ ವಿಭುಧಪ್ರಿಯ ಮಾರ್ಗ ಎಂದು ನಾಮಕರಣಗೊಳಿಸಲು ಉದ್ದೇಶಿಸಿರುತ್ತಾರೆ.

ಈ ಕುರಿತು ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ 30 ದಿನಗಳ ಒಳಗೆ ನಗರಸಭಾ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.