ಆತ್ರಾಡಿಯ ನೇಸರ ಜ್ಞಾನ ವಿಕಾಸ ಕೇಂದ್ರದಲ್ಲಿ ‘ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ’.

ಉಡುಪಿ: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಮಣಿಪಾಲ ವಲಯದ ಆತ್ರಾಡಿ ನೇಸರ ಜ್ಞಾನ ವಿಕಾಸ ಕೇಂದ್ರದಲ್ಲಿ “ಪೌಷ್ಟಿಕ ಆಹಾರ ಪದ್ಧತಿ” ಬಗ್ಗೆ ಮಾಹಿತಿ ಶಿಬಿರವು ಅತ್ರಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಯವರ ಅದ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ತಾಲೂಕು ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಸತ್ಯಾನಂದ ನಾಯಕ್ ರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮಭಿವೃದ್ಧಿ ಯೋಜನೆಯ ಹತ್ತು ಹಲವು ಸೇವಾಯೋಜನೆಯ ಬಗ್ಗೆ ತಿಳಿಸುತ್ತಾ ಮಹಿಳಾ ಜ್ಞಾನವಿಕಾಸಕ್ಕೆ ಯೋಜನೆಯ ಕೊಡುಗೆಯನ್ನು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಯೋಗ ಮತ್ತು ಪೃಕೃತಿ ಚಿಕಿತ್ಸಾಲಯ ಪರೀಕ ಇಲ್ಲಿನ ಪೌಷ್ಟಿಕ ಆಹಾರ ವಿಭಾಗದ ಡಾ. ಅನ್ವಿತಾ ಯು ರವರು ಪೌಷ್ಟಿಕ ಆಹಾರದ ಮಹತ್ವ ವನ್ನು ಮತ್ತು ಅದಕ್ಕಾಗಿ ಕೆಲ ಆಹಾರ ಪತ್ಯೆ ಮಾಡಬೇಕಾದ ಅನಿವಾರ್ಯತೆಯನ್ನು ತಿಳಿಸಿದರು. ಇಂದಿನ ಆಹಾರ ಪದ್ಧತಿಯಿಂದ ಮನುಷ್ಯನ ಆರೋಗ್ಯದಲ್ಲಿ ಆಗುವ ಏರು ಪೇರುಗಳನ್ನು ಉದಾಹರಣೆ ಗಳ ಮೂಲಕ ತಿಳಿಸುತ್ತ ಆಹಾರ ಸೇವನೆಯ ಕ್ರಮ ಮತ್ತು ಮನುಷ್ಯನ ಆರೋಗ್ಯಕ್ಕೆ ಹೊಂದುವ ಮತ್ತು ಆರೋಗ್ಯಕ್ಕೆ ಮಾರಕ ವಾಗಿರುವ ಆಹಾರ ವಸ್ತುಗಳನ್ನು ಹೆಸರಿಸಿದರು.

ಯೋಜನೆಯ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ರವರು ಯೋಜನೆಯ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಪೂರ್ಣಿಮಾ, ನೇಸರ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಶ್ರೀಮತಿ ಸಹನಾ, ಆತ್ರಾಡಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ನಾಯ್ಕ್, ಸೇವಾ ಪ್ರತಿನಿಧಿ ಶ್ರೀಮತಿ ಜರೀನಾ ಮುಂತಾದವರು ಉಪಸ್ಥಿತರಿದ್ದರು.

ಜ್ಞಾನ ವಿಕಾಸ ಕೇಂದ್ರ ತಾಲೂಕು ಸಮನ್ವಯ ಅಧಿಕಾರಿ ಶ್ರೀಮತಿ ಪೂರ್ಣಿಮಾರವರ ಕಾರ್ಯಕ್ರಮ ನಿರ್ವಹಣೆ ಶ್ಲಾಘನೀಯವಾಗಿತ್ತು. ಶ್ರೀಮತಿ ಕಾಂತಿಯವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಶ್ರೀಮತಿ ಸುಮಾ ನಾಯಕ್ ಗುಂಡಿಬೈಲ್ ರವರು ಎಲ್ಲರನ್ನೂ ಸ್ವಾಗತ ಮಾಡಿದರು. ಶ್ರೀಮತಿ ಶಾಂತ ಟೀಚರ್ ರವರು ಸರ್ವರಿಗೂ ಧನ್ಯವಾದವನ್ನು ನೀಡಿದರು. ಕೊನೆಯಲ್ಲಿ ಎಲ್ಲಾ ಸದಸ್ಯರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ವಿವಿಧ ಬಗೆಯ ಪೌಷ್ಟಿಕ ಆಹಾರವನ್ನು ಎಲ್ಲರೂ ಹಂಚಿ ಊಟ ಮಾಡಿದರು.