ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಜೂನ್ 2ಕ್ಕೆ ಎರಡು ಲಕ್ಷ ದಾಟಿದೆ.
ದೇಶದಲ್ಲಿ ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗೆವರೆಗೆ ಹೊಸ 8,171 ಪ್ರಕರಣಗಳು ದಾಖಲಾಗಿದ್ದು, ಸೋಂಕು ಪ್ರಕರಣಗಳು ಸಂಖ್ಯೆ ಒಟ್ಟು 1,98,706 ಆಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಇತರ ರಾಜ್ಯಗಳು ನೀಡಿದ ಮಾಹಿತಿ ಪ್ರಕಾರ, ಸೋಂಕಿತರ ಒಟ್ಟು ಸಂಖ್ಯೆಯು 2,00,403ಕ್ಕೆ ಏರಿದೆ.
ಇದೀಗ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,598ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮೃತರಲ್ಲಿ ಶೇ 50ರಷ್ಟು ಮಂದಿ 60 ವರ್ಷಕ್ಕಿಂತ ಹೆಚ್ಚಿನವರು ಆಗಿದ್ದಾರೆ. ಸೋಂಕಿನಿಂದ ಮೃತಪಟ್ಟವರಲ್ಲಿ ಶೇ 38ರಷ್ಟು ಮಂದಿ 60–74ರ ವಯೋಮಾನದವರಾಗಿದ್ದು, 75 ವರ್ಷಕ್ಕಿಂತ ಹೆಚ್ಚಿನವರು ಮೃತಪಟ್ಟ ಪ್ರಮಾಣವು ಶೇ 12ರಷ್ಟಿದೆ ಎಂದು ಸರ್ಕಾರದ ವಿಶ್ಲೇಷಣೆ ಹೇಳಿದೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತವು ಜಗತ್ತಿನಲ್ಲಿ ಏಳನೇ ಸ್ಥಾನದಲ್ಲಿದೆ ಎಂದು ತಿಳಿಸಿದೆ.